ADVERTISEMENT

‘ವಿದಾಯ ಭಾಷಣ’ದಲ್ಲಿ ಐಎಸ್‌ ಸೋಲೊಪ್ಪಿಕೊಂಡ ಬಾಗ್ದಾದಿ

ಪಿಟಿಐ
Published 2 ಮಾರ್ಚ್ 2017, 7:34 IST
Last Updated 2 ಮಾರ್ಚ್ 2017, 7:34 IST
‘ವಿದಾಯ ಭಾಷಣ’ದಲ್ಲಿ ಐಎಸ್‌ ಸೋಲೊಪ್ಪಿಕೊಂಡ ಬಾಗ್ದಾದಿ
‘ವಿದಾಯ ಭಾಷಣ’ದಲ್ಲಿ ಐಎಸ್‌ ಸೋಲೊಪ್ಪಿಕೊಂಡ ಬಾಗ್ದಾದಿ   

ಕೈರೊ: ಪಶ್ಚಿಮ ಮೊಸುಲ್‌ ನಗರವನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಇರಾಕ್‌ ಪಡೆಗಳು ಮುನ್ನಡೆ ಸಾಧಿಸುತ್ತಿದ್ದಂತೆ ಇಸ್ಲಾಮಿಕ್‌ ಸ್ಟೇಟ್‌ ಉಗ್ರ ಸಂಘಟನೆಯ (ಐಎಸ್‌) ಮುಖ್ಯಸ್ಥ ಅಬು ಬಕರ್‌ ಅಲ್‌ ಬಾಗ್ದಾದಿ ‘ತನ್ನ ಸಂಘಟನೆಗೆ ಇರಾಕ್‌ನಲ್ಲಿ ಸೋಲಾಗಿದೆ’ ಎಂದು ಒಪ್ಪಿಕೊಂಡಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

‘ವಿದಾಯ ಭಾಷಣ’ ಮಾಡಿರುವ ಬಾಗ್ದಾದಿ, ‘ನಿಮ್ಮ ರಾಷ್ಟ್ರಗಳಿಗೆ ನೀವು ತಕ್ಷಣ ಹಿಂದಿರುಗಿ, ಇಲ್ಲವೇ ನಿಮ್ಮನ್ನು ನೀವೇ ಸ್ಫೋಟಿಸಿಕೊಳ್ಳಿ’ ಎಂದು ತನ್ನ ಸಂಘಟನೆಯ ಅರಬೇತರ ಹೋರಾಟಗಾರರಿಗೆ ಸಂದೇಶ ರವಾನಿಸಿದ್ದಾನೆ.

ಬಾಗ್ದಾದಿ ತಾನು ನೀಡಿರುವ ಸಂದೇಶಕ್ಕೆ ‘ವಿದಾಯ ಭಾಷಣ’ ಎಂದು ಹೆಸರಿಸಿದ್ದು, ಸಂದೇಶವನ್ನು ಐಸಿಸ್‌ ಸಂಘಟನೆಯ ಮೌಲ್ವಿಗಲು, ಪಂಡಿತರು ಹಾಗೂ ಪ್ರಚಾರಕರಿಗೆ ಹಂಚಿಕೆ ಮಾಡಲಾಗಿದೆ ಎಂದು ಇರಾಕ್‌ನ ಸುದ್ದಿವಾಹಿನಿ ಅಲ್‌ಸುಮಾರಿಯಾವನ್ನು ಪ್ರಸ್ತಾಪಿಸಿ ಅಲ್‌ ಅರೇಬಿಯಾ ವರದಿ ಪ್ರಕಟಿಸಿದೆ.

ADVERTISEMENT

‘ನಿಮ್ಮ ರಾಷ್ಟ್ರಗಳಿಗೆ ತಕ್ಷಣ ಹಿಂದಿರುಗಿ. ಇಲ್ಲವೇ ನಿಮ್ಮನ್ನು ನೀವೇ ಸ್ಫೋಟಿಸಿಕೊಳ್ಳಿ. ಸ್ವರ್ಗದಲ್ಲಿ ನಿಮಗೆ ನಾನು 72 ಮಹಿಳೆಯರನ್ನು ಅನುಭೋಗಕ್ಕೆ ನೀಡುತ್ತೇನೆ‘ ಎಂದು ಬಾಗ್ದಾದಿ ಹೇಳಿದ್ದಾಗಿ ವರದಿಯಾಗಿದೆ.

ಇರಾಕ್‌ ಸೇನೆಯು ಐಸಿಸ್‌ ಉಗ್ರರ ವಶದಲ್ಲಿರುವ ಮೊಸುಲ್‌ ವಶಪಡಿಸಿಕೊಳ್ಳುವತ್ತ ಮುನ್ನಡೆ ಸಾಧಿಸಿದ್ದು, ಉಗ್ರರನ್ನು ಹತ್ತಿಕ್ಕುವ ಎಲ್ಲಾ ಯತ್ನ ಕೈಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.