ಕಠ್ಮಂಡು: ವಿಶ್ವದ ಅತ್ಯಂತ ಎತ್ತರ ಶಿಖರ ಮೌಂಟ್ ಎವರೆಸ್ಟ್ ಏರಲು ನೆರವಾದ ಶೇರ್ಪಾಗಳಿಗೆ ನೇಪಾಳ ಸರ್ಕಾರವು ಮಂಗಳವಾರ ಸನ್ಮಾನಿಸಿತು. ಸ್ವತಃ ಪರ್ವತಾರೋಹಿ, ಎವರೆಸ್ಟ್ ದಾಖಲೆ ಏರಿ ದಾಖಲೆ ಹೊಂದಿರುವ ಸಚಿವೆ ಬಿನಾ ಬಗಾರ್ ಅವರೇ ಶೇರ್ಪಾಗಳನ್ನು ಸನ್ಮಾನಿಸಿದ್ದು ವಿಶೇಷ.
ಎಡ್ಮಂಡ್ ಹಿಲರಿ ಮತ್ತು ಆತನ ಮಾರ್ಗದರ್ಶಕ ತೇನ್‌ಜಿಂಗ್ ನಾರ್ವೆ1953ರಲ್ಲಿ ಮೊದಲ ಬಾರಿ ಎವರೆಸ್ಟ್ ಗುರಿ ಮುಟ್ಟಿದ ದಿನದಂದು ಶೇರ್ಪಾಗಳನ್ನು ಪ್ರತೀ ವರ್ಷ ನೇಪಾಳ ಸರ್ಕಾರವು ಸನ್ಮಾನಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.