ಕೊಲಂಬೊ: ಮಸೀದಿ ಹಾಗೂ ಮುಸ್ಲಿಂ ಸಮುದಾಯದವರು ಹೆಚ್ಚಾಗಿ ಇರುವ ವಾಣಿಜ್ಯ ಕೇಂದ್ರಗಳ ಮೇಲೆ ದಾಳಿ ನಡೆಯಲಿದೆ ಎಂದು ವ್ಯಕ್ತಿಯೊಬ್ಬರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವುದು ಆತಂಕವನ್ನುಂಟು ಮಾಡಿದ್ದು, ಸಾಮಾಜಿಕ ಜಾಲತಾಣಗಳ ಮೇಲೆ ಮತ್ತೆ ನಿಷೇಧ ಹೇರಲಾಗಿದೆ.
ಏಪ್ರಿಲ್‌ನಲ್ಲಿ ಈಸ್ಟರ್ ಭಾನುವಾರದಂದು ಉಗ್ರರು ನಡೆಸಿದ ಸರಣಿ ಬಾಂಬ್ ದಾಳಿಯಲ್ಲಿ 260ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಫೇಸ್‌ಬುಕ್‌ನಲ್ಲಿ ಸೋಮವಾರ ದಾಳಿ ಬಗ್ಗೆ ಪೋಸ್ಟ್ ಮಾಡಿರುವುದರಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ.
ಶ್ರೀಲಂಕಾದ ಪಶ್ಚಿಮ ಕರಾವಳಿ ಪಟ್ಟಣವಾದ ಚಿಲ್ವಾದಲ್ಲಿ ಪೊಲೀಸರು ಕರ್ಫ್ಯೂ ಹೇರಿದ ಒಂದು ದಿನದ ನಂತರ, ಮಸೀದಿ ಮೇಲೆ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಮುಸ್ಲಿಂ ಮಾಲೀಕತ್ವದ ಅಂಗಡಿ ಮಾಲೀಕರೊಬ್ಬರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಜಾಲತಾಣದಲ್ಲಿ ಪೋಸ್ಟ್ ಹಾಕಿದ ವ್ಯಕ್ತಿಯನ್ನು 38 ವರ್ಷದ ಅಬ್ದುಲ್ ಹಮೀದ್ ಮೊಹಮದ್ ಹಾಸ್ಮರ್ ಎಂದು ಗುರುತಿಸಲಾಗಿದ್ದು, ಪೋಸ್ಟ್‌ನಲ್ಲಿ ‘ನೀವು ಹೆಚ್ಚು ದಿನ ಖುಷಿಯಿಂದ ಇರುವುದಿಲ್ಲ. ಒಂದು ದಿನ ದುಃಖಿಸಲೇಬೇಕು’ ಎಂದು ಬರೆದಿದ್ದಾರೆ.
ಇದಕ್ಕೆ ಆಕ್ಷೇಪಿಸಿದ್ದ ಕ್ರೈಸ್ತರು ಈ ಪೋಸ್ಟ್ ಮತ್ತೊಂದು ದಾಳಿಗೆ ಉತ್ತೇಜನ ನೀಡುವಂತಿದೆ ಎಂದು ದೂರಿದ್ದರು. ‘ಇದರಿಂದಾಗಿ ನಗರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಭಾನುವಾರ ರಾತ್ರಿಯಿಂದಲೇ ಫೇಸ್‌ಬುಕ್ ಹಾಗೂ ವಾಟ್ಸ್‌ಆಪ್ ತಾಣ
ಗಳ ಮೇಲೆ ನಿರ್ಬಂಧ ಹೇರಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.