ADVERTISEMENT

ಸಿಖ್ ವಿರೋಧಿ ದಂಗೆ: ಸೋನಿಯಾಗೆ ಜ.2ರ ಗಡುವು

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2013, 10:46 IST
Last Updated 16 ಡಿಸೆಂಬರ್ 2013, 10:46 IST

ನ್ಯೂಯಾರ್ಕ್ (ಐಎಎನ್ಎಸ್) : 1984ರ ದೆಹಲಿ ಸಿಖ್ ವಿರೋಧಿ ದಂಗೆಯಲ್ಲಿ ಷಾಮೀಲಾಗಿದ್ದ ಪಕ್ಷ ನಾಯಕರಿಗೆ 'ರಕ್ಷಣೆ ನೀಡುತ್ತಿದ್ದಾರೆ' ಎಂಬ  ಆರೋಪ ಸಂಬಂಧ ಜಾರಿ ಮಾಡಿರುವ ಸಮನ್ಸ್ ಗೆ ಉತ್ತರಿಸಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಅಮೆರಿಕ ಫೆಡರಲ್ ನ್ಯಾಯಾಲಯವು ಜನವರಿ 2ರವರೆಗೆ ಕಾಲಾವಕಾಶ ನೀಡಿದೆ. 

ಸಿಖ್ಖರ ನ್ಯಾಯಕ್ಕಾಗಿ ಹೋರಾಡುತ್ತಿರುವ ಬಲಪಂಥೀಯ ಸಂಘಟನೆ (ಎಸ್‌ಎಫ್‌ಜೆ) ಮತ್ತು ಗಲಭೆಯ ಇಬ್ಬರು ಸಂತ್ರಸ್ತರು ದೂರು ಸಲ್ಲಿಸಿದ್ದರು. ಇದನ್ನು ಪರಿಗಣಿಸಿದ ಅಮೆರಿಕ ಫೆಡರಲ್ ನ್ಯಾಯಾಧೀಶ ಬ್ರೈನ್ ಎಂ.ಕೊಗನ್ ಅವರು ಸೋನಿಯಾ ಗಾಂಧಿ ಅವರಿಗೆ ಸಮನ್ಸ್ ಜಾರಿ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT