ಮೊಟ್ಟ ಮೊದಲ ಬಾರಿಗೆ ಸೂರ್ಯನ ಬೆಳಕು ಭೂಮಿಯ ಮೇಲಿರುವಾಗ ಭೂಮಿ ಭಾಗದ ಚಿತ್ರವನ್ನು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಭೂಮಿಯಿಂದ 16 ಲಕ್ಷ ಕಿಲೋಮೀಟರ್ ದೂರದಿಂದ ಸೆರೆ ಹಿಡಿದಿದೆ.
ನಾಸಾದ ಡೀಪ್ ಸ್ಪೇಸ್ ಕ್ಲೈಮೆಟ್ ಆಬ್ಸರ್ವೇಟರಿ (ಡಿಎಸ್‌ಸಿಒವಿಆರ್) ಉಪಗ್ರಹದಲ್ಲಿ ಅಳವಡಿಸಲಾಗಿರುವ ಬಹುವರ್ಣ ಕ್ಯಾಮರಾ (ಎಪಿಕ್) ಬಳಸಿ ಈ ಚಿತ್ರವನ್ನು ತೆಗೆಯಲಾಗಿದೆ. ಫೋಟೊದ ಗುಣಮಟ್ಟ ಹೆಚ್ಚಿಸಲು ಮೂರು ಚಿತ್ರಗಳನ್ನು ಜೊತೆಯಾಗಿ ಇರಿಸಿ ಈ ಚಿತ್ರವನ್ನು ನಾಸಾ ಸಿದ್ಧಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.