ಓಸ್ಲೋ (ಏಜೆನ್ಸೀಸ್): ಟ್ಯುನೇಷಿಯಾದ ‘ನ್ಯಾಷನಲ್ ಡೈಲಾಗ್ ಕ್ವಾರ್ಟೆಟ್’ ಸಂಘಟನೆಯನ್ನು 2015ರ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.
ದಿ ಟ್ಯುನೇಷಿಯನ್ ಜನರಲ್ ಲೇಬರ್ ಯೂನಿಯನ್, ಟುನೇಷಿಯನ್ ಹ್ಯೂಮನ್ ರೈಟ್ ಲೀಗ್ ಸೇರಿದಂತೆ, ನಾಲ್ಕು ಸಂಘಟನೆಗಳನ್ನು ಒಳಗೊಂಡ ಗುಂಪು ‘ನ್ಯಾಷನಲ್ ಡೈಲಾಗ್ ಕ್ವಾರ್ಟೆಟ್’.
2011ರ ಕಾಂತ್ರಿಯ ನಂತರ ದೇಶದಲ್ಲಿ ಬಹು ಸಾಂಸ್ಕೃತಿಕ ಸಿದ್ಧಾಂತದ ತಳಹದಿಯ ಮೇಲೆ ಪ್ರಜಾಪ್ರಭುತ್ವ ಸ್ಥಾಪನೆಗೆ ‘ನ್ಯಾಷನಲ್ ಡೈಲಾಗ್ ಕ್ವಾರ್ಟೆಟ್’ ಸಂಘಟನೆಯ ಕೊಡುಗೆ ಆಧರಿಸಿ ನೊಬೆಲ್ ಶಾಂತಿ ಪುರಸ್ಕಾರ ನೀಡಲಾಗುತ್ತಿದೆ ಎಂದು ಆಯ್ಕೆ ಸಮಿತಿ ಹೇಳಿದೆ.
ಪೋಪ್ ಫ್ರಾನ್ಸಿಸ್ ಅಥವಾ ಜರ್ಮನಿಯ ಛಾನ್ಸಲರ್ ಏಂಜೆಲಾ ಮರ್ಕೆಲ್ ಅವರು ಈ ಬಾರಿಯ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಆಯ್ಕೆಯಾಗಬಹುದು ಎಂದು ಊಹಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.