ಮೆಕ್ಸಿಕೊ ಸಿಟಿ: ಸರಕು ಸಾಗಣೆ ಟ್ರಕ್ ಅಪಘಾತಕ್ಕೀಡಾಗಿ ಒಂದು ಮಗು ಸೇರಿದಂತೆ ಕನಿಷ್ಠ 10 ಮಂದಿ ಕ್ಯೂಬಾ ವಲಸಿಗರು ಮೃತಪಟ್ಟಿರುವ ದುರ್ಘಟನೆ ದಕ್ಷಿಣ ರಾಜ್ಯ ಚೈಪಾಸ್‌ನಲ್ಲಿ ಸಂಭವಿಸಿದೆ.
ಪೆಸಿಫಿಕ್ ಕರಾವಳಿ ವ್ಯಾಪ್ತಿಯಲ್ಲಿರುವ ಪಿಜಿಜಿಯಾಪನ್–ತೊನಲಾ ಹೆದ್ದಾರಿಯಲ್ಲಿ ಅಪಘಾತವಾಗಿದೆ. ಟ್ರಕ್ ಚಾಲಕ ಪರಾರಿಯಾಗಿದ್ದಾನೆ ಎಂದು ಮೆಕ್ಸಿಕೊದ ರಾಷ್ಟ್ರೀಯ ವಲಸಿಗರ ಸಂಸ್ಥೆ (ಐಎನ್‌ಎಂ) ಭಾನುವಾರ ಪ್ರಕಟಿಸಿದೆ.
'ಪ್ರಾಥಮಿಕ ವರದಿ ಪ್ರಕಾರ, ಚಾಲಕನ ಅತಿವೇಗದ ಚಾಲನೆಯಿಂದಾಗಿ ಟ್ರಕ್ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ' ಎಂದು ಉಲ್ಲೇಖಿಸಿರುವ ಐಎನ್‌ಎಂ, ಗಂಭೀರವಾಗಿ ಗಾಯಗೊಂಡಿರುವ 17 ವಲಸಿಗರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದೂ ತಿಳಿಸಿದೆ.
ಐಎನ್‌ಎಂ ಹಂಚಿಕೊಂಡಿರುವ ಚಿತ್ರಗಳಲ್ಲಿ ಟ್ರಕ್‌ಗೆ ನಂಬರ್ ಪ್ಲೇಟ್ ಇಲ್ಲದಿರುವುದು ಕಂಡು ಬಂದಿದೆ.
ಚೈಪಾಸ್‌ನಲ್ಲಿ 2021ರ ಡಿಸೆಂಬರ್‌ನಲ್ಲಿ ಸಂಭವಿಸಿದ ಟ್ರಕ್ ಅಪಘಾತದಲ್ಲಿ ಮಧ್ಯ ಅಮೆರಿಕ ಮೂಲದವರು ಎನ್ನಲಾದ 54 ವಲಸಿಗರು ಮೃತಪಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.