ಬೀಜಿಂಗ್: ಶಾಲೆಯೊಂದರ ಜಿಮ್ ಮೇಲ್ಚಾವಣಿ ಕುಸಿದು 10 ಮಂದಿ ಸಾವನ್ನಪ್ಪಿದ್ದು ಒಬ್ಬರು ಅವಶೇಷಗಳ ನಡುವೆ ಸಿಲುಕಿರುವ ಘಟನೆ ಈಶಾನ್ಯ ಚೀನಾದಲ್ಲಿ ಸೋಮವಾರ ನಡೆದಿದೆ.
ಹೈಲಾಂಗ್ಜಿಯಾಂಗ್ ಪ್ರಾಂತ್ಯದ ಕಿಕಿಹಾರ್ ನಂ. 34 ಶಾಲೆಯ ಜಿಮ್‌ನಲ್ಲಿ ಅವಘಡ ಸಂಭವಿಸಿದೆ.
ಸೋಮವಾರ ಬೆಳಿಗ್ಗೆ 14 ಜನರನ್ನು ಅವೇಷಗಳಡಿಯಿಂದ ಹೊರತೆಗೆಯಲಾಗಿತ್ತು. ನಾಲ್ವರು ಸ್ಥಳದಲ್ಲೇ ಮೃತಪಟ್ಟರೆ, ಇನ್ನು 6 ಜನ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ.
160 ಅಗ್ನಿಶಾಮಕ ಸಿಬ್ಬಂದಿ ಮತ್ತು 39 ವಾಹನಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಎಡಬಿಡದೇ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮೇಲ್ಚಾವಣಿ ಕುಸಿದಿದೆ. ಕಟ್ಟಡ ನಿರ್ಮಾಣ ಮಾಡಿದ ಕಂಪನಿಯ ಉಸ್ತುವಾರಿ ವಹಿಸಿದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಚೀನಾ ರಾಜ್ಯ ಮಾಧ್ಯಮ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.