ADVERTISEMENT

ಸಿರಿಯಾದಲ್ಲಿ ವೈಮಾನಿಕ ದಾಳಿ: 10 ಇರಾನ್ ಪರ ಉಗ್ರರ ಸಾವು

ಏಜೆನ್ಸೀಸ್
Published 30 ಡಿಸೆಂಬರ್ 2023, 13:17 IST
Last Updated 30 ಡಿಸೆಂಬರ್ 2023, 13:17 IST
<div class="paragraphs"><p>ಸಿರಿಯಾದಲ್ಲಿ ವೈಮಾನಿಕ ದಾಳಿ</p></div>

ಸಿರಿಯಾದಲ್ಲಿ ವೈಮಾನಿಕ ದಾಳಿ

   

ಬೈರೂತ್: ಪೂರ್ವ ಸಿರಿಯಾದಲ್ಲಿ ಶನಿವಾರ ನಡೆದ ವೈಮಾನಿಕ ದಾಳಿಯಲ್ಲಿ ಇರಾನ್ ಪರವಾದ 10 ಉಗ್ರರು ಹತ್ಯೆಗೀಡಾಗಿದ್ದು, 30 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಈ ದಾಳಿಯನ್ನು ಅಮೆರಿಕ ಪಡೆಗಳು ಎಸಗಿರಬಹುದು ಎನ್ನಲಾಗಿದೆ. 

ಈ ಘಟನೆಯಲ್ಲಿ ಸಿರಿಯಾದ ಮೂವರು ಸೇರಿ 10 ಇರಾನ್ ಪರವಾದ ಯೋಧರು ಮೃತಪಟ್ಟಿದ್ದಾರೆ. 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಸಿರಿಯಾದಲ್ಲಿ ಮಾನವ ಹಕ್ಕುಗಳ ಕುರಿತಾದ ವೀಕ್ಷಣಾಲಯ ತಿಳಿಸಿದೆ. 

ADVERTISEMENT

ಅಲ್ಬು ಕಮಾಲ್ ಮತ್ತು ಇರಾಕ್ ಗಡಿಯಲ್ಲಿರುವ ಡೀರ್ ಎಜ್ಜಾರ್ ಪ್ರಾಂತ್ಯದ ಸುತ್ತಮುತ್ತಲ ಪ್ರದೇಶಗಳು ಈ ದಾಳಿಯ ಗುರಿಯಾದ್ದವು. ಇರಾಕ್‌ಗೆ ಸೇರಿದ ಯುದ್ಧ ಸಾಮಗ್ರಿಗಳು ಮತ್ತು ಶಸ್ತ್ರಾಸ್ತ್ರಗಳನ್ನು ಇಟ್ಟಿದ್ದ ಗೋದಾಮು ಮೇಲೂ ದಾಳಿ ನಡೆದಿದೆ ಎಂದು ಬ್ರಿಟನ್ ಮೂಲದ ವೀಕ್ಷಣಾಲಯ ತಿಳಿಸಿದೆ. 

ಇಸ್ರೇಲ್–ಹಮಾಸ್ ಬಂಡುಕೋರರ ಮಧ್ಯೆ ಯುದ್ಧ ಆರಂಭವಾದಾಗಿನಿಂದಲೂ ಮಧ್ಯಪ್ರಾಚ್ಯದಲ್ಲಿರುವ ಅಮೆರಿಕ ಪಡೆಗಳ ಮೇಲೆ ದಾಳಿಗಳು ಹೆಚ್ಚುತ್ತಿದ್ದು, ಇದಕ್ಕೆ ಟೆಹರಾನ್ ಪರವಾದ ಉಗ್ರರೇ ಕಾರಣವೆಂದು ಅಮೆರಿಕ ಆರೋಪಿಸುತ್ತಾ ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.