ADVERTISEMENT

ಕರಾಚಿ ಶಾಪಿಂಗ್ ಮಾಲ್‌ನಲ್ಲಿ ಅಗ್ನಿ ಅವಘಡ: 11 ಮಂದಿ ಸಾವು

ಪಿಟಿಐ
Published 25 ನವೆಂಬರ್ 2023, 10:35 IST
Last Updated 25 ನವೆಂಬರ್ 2023, 10:35 IST
<div class="paragraphs"><p>ಬೆಂಕಿ ಅವಘಡ –ಪ್ರಾತಿನಿಧಿಕ ಚಿತ್ರ</p></div>

ಬೆಂಕಿ ಅವಘಡ –ಪ್ರಾತಿನಿಧಿಕ ಚಿತ್ರ

   

ಕರಾಚಿ: ಪಾಕಿಸ್ತಾನದ ಕರಾಚಿ ನಗರದ ಶಾಪಿಂಗ್ ಮಾಲ್‌ವೊಂದರಲ್ಲಿ ಶನಿವಾರ(ನ.25) ಭಾರಿ ಅಗ್ನಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಕನಿಷ್ಠ 11 ಜನರು ಮೃತಪಟ್ಟಿದ್ದು, 6 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಾಪಿಂಗ್ ಮಾಲ್‌ನ 2ನೇ ಮಹಡಿಯಲ್ಲಿ ಬೆಳಗ್ಗೆ 7 ಗಂಟೆ ಸುಮಾರಿಗೆ ಕಾಣಿಸಿಕೊಂಡ ಬೆಂಕಿ ಬಳಿಕ ಮಾಲ್‌ನ 4, 5 ಮತ್ತು 6ನೇ ಮಹಡಿಗಳಿಗೂ ಆವರಿಸಿದೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ADVERTISEMENT

42 ಜನರ ರಕ್ಷಣೆ:

ಘಟನಾ ಸ್ಥಳಕ್ಕೆ ಧಾವಿಸಿದ 12 ಅಗ್ನಿಶಾಮಕ ತಂಡದ 50 ಸಿಬ್ಬಂದಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಕಟ್ಟಡದಲ್ಲಿ ಸಿಲುಕಿದ್ದ ಸುಮಾರು 42 ಜನರನ್ನು ರಕ್ಷಿಸಿದ್ದಾರೆ.

'ದಟ್ಟವಾದ ‌ಹೊಗೆ ಮತ್ತು ಗಾಬರಿಯಿಂದ 11 ಜನರು ಮೃತಪಟ್ಟಿದ್ದಾರೆ ಮತ್ತು ಆರು ಮಂದಿ ಗಾಯಗೊಂಡಿದ್ದಾರೆ' ಎಂದು ಮುಖ್ಯ ಅಗ್ನಿಶಾಮಕ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಘಟನೆಯಲ್ಲಿ 9 ಜನರು ಮೃತಪಟ್ಟಿದ್ದಾರೆ ಎಂದು ಕರಾಚಿ ಮೇಯರ್ ಮುರ್ತಾಜಾ ವಹಾಬ್ ಖಚಿತಪಡಿಸಿದ್ದಾರೆ. ಆದರೆ ಇದುವರೆಗೆ 11 ಶವಗಳನ್ನು ಎರಡು ಆಸ್ಪತ್ರೆಗಳಿಗೆ ತರಲಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

'9 ಮೃತದೇಹಗಳನ್ನು ಜಿನ್ನಾ ಆಸ್ಪತ್ರೆಗೆ ಹಾಗೂ 2 ಶವಗಳನ್ನು ಸಿವಿಲ್ ಆಸ್ಪತ್ರೆಗೆ ತರಲಾಗಿದೆ. ಗಾಯಗೊಂಡ 6 ಜನರ ಸ್ಥಿತಿ ಗಂಭೀರವಾಗಿದೆ' ಎಂದು ಅವರು ತಿಳಿಸಿದ್ದಾರೆ.

'ಇದು ವಾಣಿಜ್ಯ ಕಟ್ಟಡವಾಗಿದ್ದು, ಶಾಪಿಂಗ್ ಸೆಂಟರ್‌, ಕಾಲ್ ಸೆಂಟರ್‌ಗಳನ್ನು ಹೊಂದಿದೆ. ಕಳೆದ ವರ್ಷವೂ ಶಾರ್ಟ್ ಸರ್ಕ್ಯೂಟ್‌ನಿಂದ ಇದೇ ಮಾಲ್‌ನಲ್ಲಿ ಸಣ್ಣ ಪ್ರಮಾಣದ ಬೆಂಕಿ ಕಾಣಿಸಿಕೊಂಡಿತ್ತು' ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.