ಢಾಕಾ: ಬಾಂಗ್ಲಾದೇಶದಲ್ಲಿ ಜನವರಿ 7ರಂದು ಸಾರ್ವತ್ರಿಕ ಚುನಾವಣೆ ನಡೆಯಲಿರುವ ಕಾರಣ ದೇಶದಾದ್ಯಂತ ಅರೆಸೇನಾ ಗಡಿ ಭದ್ರತಾ ಪಡೆಯ 1,151 ತುಕಡಿಗಳನ್ನು ನಿಯೋಜಿಸಲಾಗಿದೆ.
ಬಾಂಗ್ಲಾ ಗಡಿ ಭದ್ರತಾ ಪಡೆಯು (ಬಿಜಿಬಿ) ಪೊಲೀಸರು, ಕ್ಷಿಪ್ರ ಕಾರ್ಯಪಡೆ (ಆರ್‌ಎಬಿ) ಮತ್ತು ಸೇನಾ ಪಡೆಗಳೊಂದಿಗೆ ಶುಕ್ರವಾರದಿಂದ 13 ದಿನಗಳ ಕಾಲ ಗಸ್ತು ತಿರುಗಿ ಶಾಂತಿ ಸುವ್ಯವಸ್ಥೆ ಕಾಪಾಡಲಿದೆ. ಪ್ರತಿಯೊಂದು ತುಕಡಿಯು ಸುಮಾರು 30 ಬಿಜಿಬಿ ಸಿಬ್ಬಂದಿಯನ್ನು ಒಳಗೊಂಡಿರಲಿದೆ.
‘ಡಿಸೆಂಬರ್ 29ರಿಂದ ಜನವರಿ 10ರವರೆಗೆ ವಿವಿಧ ಕ್ಷೇತ್ರಗಳಲ್ಲಿ ಭದ್ರತೆಯ ಹೊಣೆಯ ಹೊತ್ತು ಬಿಜಿಬಿಯು ಕಾರ್ಯನಿರ್ವಹಿಸಲಿದೆ. ಜ.3ರಿಂದ 10ರವರೆಗೆ ಸೇನಾ ಸಿಬ್ಬಂದಿ ಅದರೊಂದಿಗೆ ಕೈಜೋಡಿಸಲಿದ್ದಾರೆ’ ಎಂದು ಅರೆಸೇನಾ ಪಡೆ ತಿಳಿಸಿದೆ.
ಈ ಮಧ್ಯೆ ಪ್ರಮುಖ ವಿರೋಧ ಪಕ್ಷ, ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಕ್ಷವು ಚುನಾವಣೆಯನ್ನು ಬಹಿಷ್ಕರಿಸಿ ಪ್ರತಿಭಟನೆಗಳನ್ನು ನಡೆಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.