ಪುಣೆ(ಮಹಾರಾಷ್ಟ್ರ): ಲಾಕ್ ಡೌನ್ ಜಾರಿಯಾಗಿರುವ ಕಾರಣ ಪುಣೆಯಲ್ಲಿ ಸಿಲುಕಿಕೊಂಡಿದ್ದ 125 ಮಂದಿ ಬಹರೇನ್ ಪ್ರಜೆಗಳು ಶನಿವಾರ ವಿಶೇಷ ವಿಮಾನದಲ್ಲಿ ತವರಿಗೆ ಮರಳಿದ್ದಾರೆ.
ಮಾರ್ಚ್ 24ರಿಂದ ಪುಣೆಯಲ್ಲಿಯೇ ಸಿಲುಕಿಕೊಂಡಿದ್ದ ಬಹರೇನ್ ಪ್ರಜೆಗಳನ್ನು ಅವರ ತವರಿಗೆ ಕಳುಹಿಸುವುದಕ್ಕಾಗಿಯೇ ವಿಶೇಷ ವಿಮಾನ ವ್ಯವಸ್ಥೆ ಮಾಡಲಾಗಿತ್ತು.
ಭಾರತದಲ್ಲಿ ಎಲ್ಲಾ ಅಂತರರಾಷ್ಟ್ರೀಯ ವಿಮಾನಗಳ ಹಾರಾಟವನ್ನು ರದ್ದು ಪಡಿಸಲಾಗಿದೆ. ಆದರೂ ಬಹರೇನ್ ಪ್ರಜೆಗಳಿಗಾಗಿ ವಿಶೇಷ ವಿಮಾನವನ್ನು ವ್ಯವಸ್ಥೆ ಮಾಡಿದ್ದು ಶನಿವಾರ ಪುಣೆಯಿಂದ ತಮ್ಮ ಲಗ್ಗೇಜುಗಳೊಂದಿಗೆಸ್ವದೇಶಕ್ಕೆ ತೆರಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.