ADVERTISEMENT

ಪೆರುವಿನಲ್ಲಿ ಚುನಾವಣೆಗಳನ್ನು ನಡೆಸಬೇಕು ಎಂದು ಪ್ರತಿಭಟನೆ: 13 ಜನರ ಸಾವು

ಏಜೆನ್ಸೀಸ್
Published 10 ಜನವರಿ 2023, 14:52 IST
Last Updated 10 ಜನವರಿ 2023, 14:52 IST
   

ಲಿಮಾ (ಎಪಿ) : ಶೀಘ್ರವೇ ಚುನಾವಣೆಗಳನ್ನು ನಡೆಸಬೇಕು ಎಂದು ಆಗ್ರಹಿಸಿ ಆಗ್ನೇಯ ಪೆರುವಿನಲ್ಲಿ ಪ್ರತಿಭಟನೆಗಳು ಪುನರಾರಂಭವಾಗಿದ್ದು, ಸೋಮವಾರ 13 ಮಂದಿ ಮೃತಪಟ್ಟಿದ್ದಾರೆ.

ದೇಶದ ನಿರ್ಲಕ್ಷಿತ ಗ್ರಾಮೀಣ ಭಾಗದ ಜನರು ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳುತ್ತಿದ್ದು, ಅವರು ಈಗಲೂ ಪದಚ್ಯುತ ಅಧ್ಯಕ್ಷ ಪೆಡ್ರೊ ಕ್ಯಾಸ್ಟಿಲೊಗೆ ನಿಷ್ಠರಾಗಿದ್ದಾರೆ.

ಈ ಪ್ರಕರಣದ ಕುರಿತು ಪೆರುವಿನ ಮಾನವ ಹಕ್ಕುಗಳ ಸಂರಕ್ಷಣಾ ಏಜೆನ್ಸಿಯು ತನಿಖೆಗೆ ಕರೆ ನೀಡಿದೆ. ಕ್ಯಾಸ್ಟಿಲೊ ಪದಚ್ಯುತಿ ಬಳಿಕ ದೇಶದ ವಿವಿಧೆಡೆ ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.