ADVERTISEMENT

ಚೀನಾ: ಭರತನಾಟ್ಯ ರಂಗಪ್ರವೇಶ ಮಾಡಿದ 13 ವರ್ಷದ ಬಾಲಕಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಆಗಸ್ಟ್ 2024, 14:42 IST
Last Updated 15 ಆಗಸ್ಟ್ 2024, 14:42 IST
<div class="paragraphs"><p>ಚೀನಾ ಇದೇ ಮೊದಲ ಬಾರಿಗೆ ಭರತನಾಟ್ಯ ರಂಗಪ್ರವೇಶ ಮಾಡಿದ 13 ವರ್ಷದ ಬಾಲಕಿ</p></div>

ಚೀನಾ ಇದೇ ಮೊದಲ ಬಾರಿಗೆ ಭರತನಾಟ್ಯ ರಂಗಪ್ರವೇಶ ಮಾಡಿದ 13 ವರ್ಷದ ಬಾಲಕಿ

   

ಪಿಟಿಐ ಚಿತ್ರ

ಬೀಜಿಂಗ್‌: ಇದೇ ಮೊದಲ ಬಾರಿಗೆ ಚೀನಾದಲ್ಲಿ 13 ವರ್ಷದ ಬಾಲಕಿಯೊಬ್ಬಳು ಭರತನಾಟ್ಯ ರಂಗಪ್ರವೇಶ ಮಾಡಿದ್ದಾಳೆ. 

ADVERTISEMENT

ಈ ಮೂಲಕ ಭಾರತದ ಪುರಾತನ ಕಲೆಯೊಂದು ಚೀನಾದಲ್ಲೂ ಜನಪ್ರಿಯತೆ ಗಳಿಸುತ್ತಿದೆ.

ಲೆ ಮುಝಿ ಎನ್ನುವ 13 ವರ್ಷದ ಬಾಲಕಿ ಆ.11 ರಂದು ರಂಗಪ್ರವೇಶ ಮಾಡಿದ್ದಾಳೆ. ಮುಝಿ ರಂಗಪ್ರವೇಶಕ್ಕೆ ಆಕೆಯ ಗುರು ಲೀಲಾ ಸಾಮ್ಸನ್‌, ಚೀನಾ ನಾಗರಿಕರು ಹಾಗೂ ಅಪಾರ ಪ್ರಮಾಣದ ಭಾರತ ಮೂಲದವರು ಸಾಕ್ಷಿಯಾಗಿದ್ದಾರೆ. 

ಭರತನಾಟ್ಯ ರಂಗಪ್ರವೇಶ ಮಾಡಿದ 13 ವರ್ಷದ ಬಾಲಕಿ

‘ಸಂಪೂರ್ಣ ತರಬೇತಿ ಪಡೆದು, ರಂಗಪ್ರವೇಶ ಮಾಡಿದ ಚೀನಾದ ಮೊದಲ ವಿದ್ಯಾರ್ಥಿನಿ ಮುಝಿ. ಆಕೆ ಸಾಂಪ್ರದಾಯಿಕ ವಿಧಾನದಲ್ಲೇ ರಂಗಪ್ರವೇಶ ಮಾಡಿದ್ದಾಳೆ. ಇದೊಂದು ದಾಖಲೆಯಾಗಿದೆ’ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದ ಭಾರತೀಯ ರಾಯಭಾರ ಕಚೇರಿಯ ಕಾರ್ಯದರ್ಶಿ ಟಿ. ಎಸ್. ವಿವೇಕಾನಂದ್ ಪಿಟಿಐ ಜತೆ ಮಾತನಾಡುವಾಗ ಹೇಳಿದ್ದಾರೆ.

ವರದಿಗಳ ಪ್ರಕಾರ, ಮುಝಿ ವಿವಿಧ ಭಂಗಿಗಳಲ್ಲಿ ನೃತ್ಯ ಮಾಡುವ ಮೂಲಕ 2 ಗಂಟೆಗಳ ಕಾಲ ಪ್ರದರ್ಶನ ನೀಡಿದ್ದಾರೆ. ಅಲ್ಲದೆ ಮುಝಿ ರಂಗಪ್ರವೇಶಕ್ಕೆ ಚೆನ್ನೈ ಮೂಲದ ಸಂಗೀತ ತಂಡವೊಂದು ತಾಳ ನುಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.