ADVERTISEMENT

ಸೈಬರ್ ಹಗರಣದಲ್ಲಿ ಸಿಲುಕಿದ್ದ 14 ಭಾರತೀಯರ ರಕ್ಷಣೆ: ಭಾರತೀಯ ರಾಯಭಾರ ಕಚೇರಿ

ಪಿಟಿಐ
Published 21 ಜುಲೈ 2024, 16:17 IST
Last Updated 21 ಜುಲೈ 2024, 16:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸಿಂಗಪುರ: ಕಾಂಬೋಡಿಯಾದಲ್ಲಿ ಸೈಬರ್ ಅಪರಾಧ ಹಗರಣದಲ್ಲಿ ಸಿಲುಕಿದ್ದ 14 ಭಾರತೀಯರನ್ನು ರಕ್ಷಣೆ ಮಾಡಲಾಗಿದ್ದು, ಅವರನ್ನು ಸ್ವದೇಶಕ್ಕೆ ವಾಪಸ್ ಕಳುಹಿಸಲು ಯತ್ನಿಸಲಾಗುತ್ತಿದೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. 

ವಿದೇಶದಲ್ಲಿ ಕೆಲಸ ಕೊಡಿಸುವ ವಂಚನೆಯ ಜಾಲದ ಬಲೆಗೆ ಬಿದ್ದು, ಸೈಬರ್ ಅಪರಾಧ ಘಟನೆಗಳಲ್ಲಿ ಸಿಲುಕಿದ್ದ 650ಕ್ಕೂ ಹೆಚ್ಚು ಭಾರತೀಯರ ರಕ್ಷಣೆ ಮತ್ತು ಅವರನ್ನು ಸ್ವದೇಶಕ್ಕೆ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಕಾಂಬೋಡಿಯಾದಲ್ಲಿರುವ ಭಾರತದ ರಾಯಭಾರ ಕಚೇರಿ ತಿಳಿಸಿದೆ. 

ಸೈಬರ್ ವಂಚನೆಯ ಜಾಲಕ್ಕೆ ಸಿಲುಕಿದ ಭಾರತೀಯರ ಕುರಿತು ಭಾರತದ ರಾಯಭಾರ ಕಚೇರಿಯು, ಕಾಂಬೋಡಿಯಾದ ಪೊಲೀಸರಿಗೆ ಮಾಹಿತಿ ನೀಡಿತ್ತು. ಸೈಬರ್ ಅಪರಾಧ ಚಟುವಟಿಕೆಗಳಿಂದ ರಕ್ಷಣೆ ಮಾಡಲಾಗಿರುವ ಭಾರತೀಯರನ್ನು ಸರ್ಕಾರೇತರ ಸಂಸ್ಥೆಯೊಂದು ನೋಡಿಕೊಳ್ಳುತ್ತಿದೆ ಎಂದು ಭಾರತೀಯ ದೂತವಾಸ ತಿಳಿಸಿದೆ. 

ADVERTISEMENT

ಕಾಂಬೋಡಿಯಾದಲ್ಲಿ ಭಾರತೀಯರ ರಕ್ಷಣೆಗಾಗಿ ದೂತವಾಸ ಕಚೇರಿ ಕಾರ್ಯಪ್ರವೃತ್ತವಾಗಿದೆ. ದೇಶದಲ್ಲಿ ಉದ್ಯೋಗ ನೀಡುವುದಾಗಿ ಆಮಿಷ ಒಡ್ಡುವ ಸಂದೇಶದ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಅನುಮಾನಾಸ್ಪದವಾಗಿ ಕಂಡುಬರುವ ಘಟನೆಗಳ ಕುರಿತು ದೂತವಾಸ ಕಚೇರಿಗೆ ತಿಳಿಸುವಂತೆ ಸೂಚಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.