ವೆಲ್ಲಿಂಗ್ಟನ್: ನ್ಯೂಜಿಲೆಂಡ್ ಸಮುದ್ರದ ದೂರದ ಪ್ರದೇಶದಲ್ಲಿ 145 ತಿಮಿಂಗಿಲಗಳು ಸಾವನ್ನಪ್ಪಿವೆ. ತೀರ ಪ್ರದೇಶದಲ್ಲಿ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದ 12ಕ್ಕೂ ಹೆಚ್ಚು ತಿಮಿಂಗಿಲಗಳಿಗೆ ದಯಾ ಮರಣ ಕಲ್ಪಿಸಲಾಗಿದೆ.
ದ್ವೀಪ ರಾಷ್ಟ್ರದ ದಕ್ಷಿಣ ಕರಾವಳಿಯಿಂದ 30 ಕಿಲೋ ಮೀಟರ್ ದೂರದಲ್ಲಿರುವ ಸ್ಟೀವರ್ಟ್ ಪ್ರದೇಶದಲ್ಲಿ ಪ್ರವಾಸಿಗರೊಬ್ಬರು ಇದನ್ನು ಪತ್ತೆ ಹಚ್ಚಿದ್ದಾರೆ.
145ರಲ್ಲಿ ಅರ್ಧದಷ್ಟು ಸಾವನ್ನಪ್ಪಿದ್ದು, ಉಳಿದವುಗಳ ಪರಿಸ್ಥಿತಿ ಚಿಂತಾಜನಕವಾಗಿದೆ. ಕೆಲವು ಆಳ ಸಮುದ್ರದಲ್ಲಿ ಇದ್ದು, ಸ್ಥಳ ಪತ್ತೆ ಹಚ್ಚುವುದು ಕಷ್ಟಕರವಾಗಿದೆ. ಅದಕ್ಕಾಗಿಯೇ ತೀರಕ್ಕೆ ಬಂದು ಬೀಳುವ ತಿಮಿಂಗಿಲಗಳಿಗೆ ದಯಾಮರಣ ಕಲ್ಪಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ತಿಮಿಂಗಿಲಗಳ ಸಾವು ತೀರ ದುಃಖಕರ. ಅವುಗಳು ಮೊದಲಿನ ಸ್ಥಿತಿ ತಲುಪುವ ಸಾಧ್ಯತೆ ತೀರ ಕಡಿಮೆ’ ಎಂದು ಸ್ಟಿವರ್ಟ್ ದ್ವೀಪದ ಸಂರಕ್ಷಣಾ ಇಲಾಖೆಯ ವ್ಯವಸ್ಥಾಪಕ (ಕಾರ್ಯಾಚರಣೆ) ರೆನ್ ಲಿಪೆನ್ಸ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.