ಜಕಾರ್ತ: ಇಂಡೊನೇಷ್ಯಾದ ಸುಲವೇಸಿ ದ್ವೀಪದಲ್ಲಿ ಪ್ರಯಾಣಿಕರ ದೋಣಿ ಮಗುಚಿ 15 ಜನ ಮೃತಪಟ್ಟಿದ್ದು, 33 ಪ್ರಯಾಣಿಕರನ್ನು ರಕ್ಷಣೆ ಮಾಡಲಾಗಿದೆ ಎಂದು ರಕ್ಷಣಾ ತಂಡದ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಆಗ್ನೇಯ ಸುಲವೇಸಿ ಪ್ರಾಂತ್ಯದ ಬುಟಾನ್ ಸೆಂಟ್ರಲ್ ರೀಜೆನ್ಸಿಯ ಲ್ಯಾಂಟೊ ಗ್ರಾಮದಿಂದ ಹತ್ತಿರದ ಲಗಿಲಿ ಗ್ರಾಮಕ್ಕೆ ಪ್ರಯಾಣಿಸುತ್ತಿದ್ದ ಹಡಗು ಭಾನುವಾರ ತಡರಾತ್ರಿ ಮುಳುಗಿದೆ ಎಂದು ಸ್ಥಳೀಯ ಶೋಧ ಮತ್ತು ರಕ್ಷಣಾ ಸಂಸ್ಥೆಯ ಮುಖ್ಯಸ್ಥ ಮುಹಮ್ಮದ್ ಅರಫಾ ತಿಳಿಸಿದ್ದಾರೆ.
20 ಜನರನ್ನು ಸಾಗಿಸುವ ಸಾಮರ್ಥ್ಯ ಹೊಂದಿದ್ದ ಮರದ ದೋಣಿಯಲ್ಲಿ ಹೆಚ್ಚಿನ ಪ್ರಯಾಣಿಕರನ್ನು ಸಾಗಿಸಲಾಗುತ್ತಿತ್ತು.
ಆಗ್ನೇಯ ಸುಲವೇಸಿ ಪ್ರಾಂತ್ಯದ ಬುಟಾನ್ ಸೆಂಟ್ರಲ್ ರೀಜೆನ್ಸಿಯ ಲ್ಯಾಂಟೊ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಮೀಪದ ಲಗಿಲಿ ಗ್ರಾಮಕ್ಕೆ ಜನರು ಮೀನುಗಾರಿಕಾ ಹಾಗೂ ಪ್ರಯಾಣಿಕರ ದೋಣಿಗಳಲ್ಲಿ ಪ್ರಯಾಣಿಸುತ್ತಿದ್ದರು. ಇದರಲ್ಲಿ ಒಂದು ದೋಣಿ ಮಗುಚಿ ಬಿದ್ದಿದೆ.
ಶೋಧ ಕಾರ್ಯಕ್ಕೆ ಎರಡು ಸಣ್ಣ ಹಡುಗು, ಮೀನುಗಾರಿಕಾ ದೋಣಿಗಳನ್ನು ಬಳಸಿಕೊಳ್ಳಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.