ಬೈರುತ್: ಸಿರಿಯಾದ ಅಲೆಪ್ಪೊ ನಗರದಲ್ಲಿ ಭಾನುವಾರ ಬೆಳಗಿನ ಜಾವ ಕಟ್ಟಡವೊಂದು
ಕುಸಿದುಬಿದ್ದಿದ್ದು, ಮಗು ಸೇರಿ ಕನಿಷ್ಠ 16 ಮಂದಿ ಮೃತಪಟ್ಟಿದ್ದಾರೆ. ನಾಲ್ಕು ಮಂದಿ ಗಾಯಗೊಂಡಿದ್ದಾರೆ. ಐದು ಅಂತಸ್ತಿನ ಕಟ್ಟಡ ಕುಸಿದಿದ್ದು, ಕಟ್ಟಡದಲ್ಲಿ ಕನಿಷ್ಠ 30 ಮಂದಿ ವಾಸವಿದ್ದರು.
ಈ ಪ್ರದೇಶವು ಅಮೆರಿಕ ಬೆಂಬಲಿತ ಸಿರಿಯಾ ಪ್ರಜಾಸತ್ತಾತ್ಮಕ ಪಡೆಯ ನಿಯಂತ್ರಣದಲ್ಲಿದೆ ಎಂದು ಸಿರಿಯಾದ ಮಾಧ್ಯಮ ವರದಿ ಮಾಡಿದೆ. ನೀರು ಸೋರಿಕೆಯಿಂದಾಗಿ ಕಟ್ಟಡದ ಅಡಿಪಾಯವು ಶಿಥಿಲಗೊಂಡಿತ್ತು ಎಂದು ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.