ಕೊಲಂಬೊ: ಶ್ರೀಲಂಕಾ ಜಲ ಗಡಿಯಲ್ಲಿ ಮೀನುಗಾರಿಕೆ ಮಾಡಿದ ಆರೋಪದ ಮೇಲೆ 17 ಭಾರತೀಯ ಮೀನುಗಾರರನ್ನು ಅಲ್ಲಿನ ನೌಕಾಪಡೆ ಬಂಧಿಸಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
‘ಮನ್ನಾರ್ ದ್ವೀಪದ ಉತ್ತರ ಭಾಗದಲ್ಲಿ ಮೀನುಗಾರನ್ನು ಬಂಧಿಸಲಾಗಿದ್ದು, ಎರಡು ಮೀನುಗಾರಿಕಾ ದೋಣಿಯನ್ನು ವಶಕ್ಕೆ ಪಡೆಯಲಾಗಿದೆ. ಇದಕ್ಕಾಗಿ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು’ ಎಂದು ಶ್ರೀಲಂಕಾ ನೌಕಾಪಡೆ ಪ್ರಕಣೆಯಲ್ಲಿ ತಿಳಿಸಿದೆ.
ಬಂಧಿತ 17 ಮೀನುಗಾರರನ್ನು ತಲೈಮನ್ನಾರ್‌ಗೆ ಕರೆದೊಯ್ಯಲಾಗಿದ್ದು, ಮುಂದಿನ ಕ್ರಮಕ್ಕಾಗಿ ಮನ್ನಾರ್ ಮೀನುಗಾರಿಕಾ ನಿರೀಕ್ಷಕರಿಗೆ ಹಸ್ತಾಂತರಿಸಲಾಗುವುದು ಎಂದು ಅದು ತಿಳಿಸಿದೆ.
ಈ ವರ್ಷದ ಪ್ರಾರಂಭದಿಂದ ಇಲ್ಲಿಯವರೆಗೆ 413 ಭಾರತೀಯ ಮೀನುಗಾರರನ್ನು ಬಂಧಿಸಿರುವ ಶ್ರೀಲಂಕಾ ನೌಕಾಪಡೆ, 55 ದೋಣಿಗಳನ್ನು ವಶಕ್ಕೆ ಪಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.