ADVERTISEMENT

ಕೈದಿಗಳೊಂದಿಗೆ ದೈಹಿಕ ಸಂಬಂಧ: ವೇಲ್ಸ್ ಜೈಲಿನ 18 ಮಹಿಳಾ ಗಾರ್ಡ್‌ಗಳು ವಜಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಮಾರ್ಚ್ 2023, 11:27 IST
Last Updated 13 ಮಾರ್ಚ್ 2023, 11:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಂಡನ್: ಯುನೈಟೆಡ್ ಕಿಂಗಡಮ್‌ನ ನಾರ್ತ್‌ ವೇಲ್ಸ್‌ನ ಜೈಲಿನಲ್ಲಿ ಪುರುಷ ಕೈದಿಗಳೊಂದಿಗೆ ದೈಹಿಕ ಸಂಬಂಧ ಹಾಗೂ ಅವರಿಗೆ ಸಹಾಯ ಸೌಲಭ್ಯ ನೀಡಲು ನೆರವಾದ 18 ಮಹಿಳಾ ಗಾರ್ಡ್‌ಗಳನ್ನು ಕೆಲಸದಿಂದ ವಜಾ ಮಾಡಲಾಗಿದೆ.

ಈ ಕುರಿತು ಸ್ಥಳೀಯ ನ್ಯಾಯಾಲಯ ತೀರ್ಪು ನೀಡಿದೆ ಎಂದು ಯುಕೆ ಡೈಲಿಪೋಸ್ಟ್ ವರದಿ ಮಾಡಿದೆ.

ನಾರ್ತ್‌ ವೇಲ್ಸ್‌ನ ರೆಕ್ಸ್‌ಹ್ಯಾಮ್‌ನ ಎಚ್‌ಎಂಪಿ ಬರ್ವಿನ್‌ನ ಜೈಲಿನಲ್ಲಿ 18 ಮಹಿಳಾ ಗಾರ್ಡ್‌ಗಳು ಅನೇಕ ಪುರುಷ ಕೈದಿಗಳೊಂದಿಗೆ ದೈಹಿಕ ಸಂಬಂಧ ಹೊಂದಿದ್ದರು. ಅಲ್ಲದೇ ಪರಸ್ಪರ ವಾಟ್ಸಪ್‌ನಲ್ಲಿ ನಗ್ನಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದರು ಎಂದು ವರದಿಯಲ್ಲಿ ತಿಳಿಸಲಾಗಿದೆ.

ADVERTISEMENT

ಈ ಮಹಿಳಾ ಗಾರ್ಡ್‌ಗಳು ಕಳೆದ ಆರು ವರ್ಷದಿಂದ ಈ ರೀತಿಯ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರೆಂದು ಆರೋಪಿಸಲಾಗಿದೆ.

ಜೈಲಾಧಿಕಾರಿಗಳ ಅಸೋಸಿಯೇಷನ್‌ನ ಅಧ್ಯಕ್ಷ ಮಾರ್ಕ್ ಫೇರ್‌ಹರ್ಸ್ಟ್ ಅವರು ‘ಸರಿಯಾದ ಮಹಿಳೆಯರನ್ನು ಗಾರ್ಡ್‌ಗಳಾಗಿ ನೇಮಿಸಿಕೊಳ್ಳಲಾಗಿಲ್ಲ’ ಎಂದು ಆರೋಪಿಸಿದ್ದಾರೆ. ನೇಮಕಾತಿಯಾಗುತ್ತಿರುವ ಸಿಬ್ಬಂದಿಗೆ ಮುಖಾಮುಖಿ ಸಂದರ್ಶನಗಳಿಲ್ಲ. ಎಲ್ಲವನ್ನೂ ಆನ್‌ಲೈನ್‌ನಲ್ಲಿ ಮಾಡಲಾಗುತ್ತದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

2019 ರಿಂದ, ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ಸುಮಾರು 31 ಮಹಿಳಾ ಜೈಲು ಅಧಿಕಾರಿಗಳನ್ನು, ಸಿಬ್ಬಂದಿಗಳನ್ನು ಅನುಚಿತ ಸಂಬಂಧಗಳಿಗಾಗಿ ವಜಾಗೊಳಿಸಲಾಗಿದೆ ಎಂದು ಕಾನೂನು ಸಚಿವಾಲಯದ ಅಂಕಿ–ಅಂಶಗಳು ಹೇಳುತ್ತವೆ. ಇದರಲ್ಲಿ ಒಬ್ಬ ಮಹಿಳಾ ಜೈಲು ಅಧಿಕಾರಿ ಕೈದಿಯಿಂದಲೇ ಗರ್ಭಿಣಿಯಾಗಿ ಮಗು ಪಡೆದಿದ್ದಾರೆ ಎಂದು ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.