ADVERTISEMENT

ಗ್ರೀಸ್‌ನಲ್ಲಿ ಕಾಳ್ಗಿಚ್ಚು: 18 ವಲಸಿಗರ ಸಾವು

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2023, 14:26 IST
Last Updated 23 ಆಗಸ್ಟ್ 2023, 14:26 IST
ವ್ಯಕ್ತಿ ಸಾವು–ಪ್ರಾತಿನಿಧಿಕ ಚಿತ್ರ
ವ್ಯಕ್ತಿ ಸಾವು–ಪ್ರಾತಿನಿಧಿಕ ಚಿತ್ರ   

ಅಥೆನ್ಸ್‌ (ಗ್ರೀಸ್‌): ಉತ್ತರ ಗ್ರೀಸ್‌ನ ಇವೋರ್ಸ್‌ ಪ್ರಾಂತ್ಯದಲ್ಲಿ ಕಾಳ್ಗಿಚ್ಚಿಗೆ ಬಲಿಯಾದ 18 ಮಂದಿಯ ಮೃತದೇಹಗಳನ್ನು ಅಗ್ನಿಶಾಮಕ ಸಿಬ್ಬಂದಿ ವಶಕ್ಕೆ ಪಡೆದಿದ್ದು, ಇವರು ವಲಸಿಗರಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಲೆಕ್ಸಾಂಡ್ರೋಪೊಲೀಸ್ ನಗರದಲ್ಲಿ ಕಳೆದ ನಾಲ್ಕು ದಿನದಿಂದ ಕಾಳ್ಗಿಚ್ಚು ಕಾಣಿಸಿಕೊಂಡಿದ್ದು, ಮೃತದೇಹಗಳು ದಾದಿಯಾ ಅರಣ್ಯದಲ್ಲಿ ಪತ್ತೆಯಾಗಿವೆ. ಈ ಪ್ರದೇಶದಲ್ಲಿ ಕಾಣೆಯಾದವರ ವರದಿಯಾಗಿಲ್ಲ. ಸಾವಿಗೂ ಮುನ್ನ ಇವರು ಹೇಗೆ ದೇಶಕ್ಕೆ ಪ್ರವೇಶಿಸಿದರು ಎಂದು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಗ್ರೀಸ್‌ನ ಅಗ್ನಿಶಾಮಕ ಇಲಾಖೆಯ ವಕ್ತಾರ ಯೆಯನ್ನೀಸ್‌ ಆರ್ಟೋಪಿಯೋಸ್‌ ತಿಳಿಸಿದ್ದಾರೆ.

ಮೃತರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಟರ್ಕಿ ಗಡಿಭಾಗವಾದ ಈ ಪ್ರದೇಶದಿಂದ ಸಾವಿರಾರು ವಲಸಿಗರು ಯುರೋಪ್‌ಗೆ ವಲಸೆ ಹೋಗುತ್ತಿರುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಮಂಗಳವಾರ ಗಾಳಿ ವೇಗವಾಗಿದ್ದರಿಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ನಡೆಸಿದ ಪ್ರಯತ್ನ ವ್ಯರ್ಥವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.