ವ್ಯಾಟಿಕನ್ ಸಿಟಿ (ಪಿಟಿಐ/ರಾಯಿಟರ್ಸ್): ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದಿದ್ದಕ್ಕಾಗಿ18ನೇ ಶತಮಾನದಲ್ಲಿ ಕೊಲ್ಲಲ್ಪಟ್ಟಿದ್ದ ಭಾರತೀಯ, ದೇವಸಹಾಯಂ ಪಿಳ್ಳೈ ಅವರನ್ನು ಸಂತರೆಂದುರೋಮನ್ ಕೆಥೋಲಿಕ್ ಚರ್ಚ್‌ನಲ್ಲಿ ಪೋಪ್ ಫ್ರಾನ್ಸಿಸ್ ಘೋಷಿಸಿದರು.
ಈ ಗೌರವಕ್ಕೆ ಪಾತ್ರರಾದ ಮೊದಲ ಜನಸಾಮಾನ್ಯ, ಪ್ರಥಮ ಭಾರತೀಯ ಇವರಾಗಿದ್ದಾರೆ.ವ್ಯಾಟಿಕನ್ ಸಿಟಿಯಲ್ಲಿ ನಡೆದ ಸಮಾರಂಭದಲ್ಲಿ ನಾಲ್ವರು ಮಹಿಳೆಯರನ್ನು ಒಳಗೊಂಡು 9 ಕ್ರೈಸ್ತ ಪ್ರವರ್ತಕರನ್ನು ಸಂತರೆಂದು ಪೋಪ್ ಘೋಷಿಸಿದರು.
ಹಿಂದೂ ಕುಟುಂಬದಲ್ಲಿ ಜನಿಸಿದ ನೀಲಕಂಠನ್‌ಪಿಳ್ಳೈ ಅವರು ತಿರುವಾಂಕೂರು ಅರಮನೆಯಲ್ಲಿ ಕೆಲಸ ಮಾಡುತ್ತಿದ್ದರು. ನಂತರ ಅವರು ಕ್ರೈಸ್ತ ಧರ್ಮಕ್ಕೆ ಮತಾಂತರವಾದರು. ಆಗ ಅವರು ‘ದೇವಸಹಾಯಂಪಿಳ್ಳೈ‘ ಎಂದು ಹೆಸರು ಬದಲಿಸಿಕೊಂಡರು.
1760–70ರಲ್ಲಿ ಅವರು ಜಾತ್ಯತೀತತೆ ಬಗ್ಗೆ ಹೋರಾಟ ನಡೆಸಿದರು. ಅವರು ವಿವಿಧ ಜಾತಿಗಳ ಜನರಿಂದ ಕಿರುಕುಳ ಅನುಭವಿಸಿದ್ದರು. ನಂತರ ಅವರನ್ನು ಹತ್ಯೆ ಮಾಡಲಾಯಿತು.
2012ರಲ್ಲಿದೇವಸಹಾಯಂ ಪಿಳ್ಳೈ ಅವರನ್ನು ಹುತಾತ್ಮರೆಂದು ವ್ಯಾಟಿಕನ್ ಸಿಟಿ ಗುರುತಿಸಿತು. ನಂತರದ ವರ್ಷಗಳಲ್ಲಿ ಪವಾಡವೊಂದು ಸಂಭವಿಸಿತು. ಮಹಿಳೆಯೊಬ್ಬರ ಗರ್ಭದಲ್ಲಿದ್ದ 9 ತಿಂಗಳ ಮಗು ವೈದ್ಯಕೀಯವಾಗಿ ಮೃತಪಟ್ಟಿದೆ ಎಂದು ಘೋಷಣೆ ಮಾಡಲಾಗಿತ್ತು. ಈ ವೇಳೆ ಆ ಮಹಿಳೆ ‘ದೇವಸಹಾಯಂ‘ ಅವರನ್ನು ಪ್ರಾರ್ಥನೆ ಮಾಡಿದಾಗ ಮಗು ಬದುಕುಳಿಯಿತು ಎಂದು ಕನ್ಯಾಕುಮಾರಿ ಫಾದರ್‌ಗಳು ಹೇಳಿದ್ದಾರೆ. ಇದನ್ನುಪೋಪ್ ಫ್ರಾನ್ಸಿಸ್ ಸಹ ಒಪ್ಪಿದ್ದಾರೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.