ವಾಷಿಂಗ್ಟನ್ (ಪಿಟಿಐ): ‘ಇಂಡಿಯಾ ಫಿಲಾಂಥ್ರಪಿ ಅಲಯನ್ಸ್ ಸಂಸ್ಥೆ ಹಮ್ಮಿಕೊಂಡಿದ್ದ ‘ಇಂಡಿಯಾ ಗೀವಿಂಗ್ ಡೇ’ (ಭಾರತಕ್ಕೆ ಉಡುಗೊರೆ ನೀಡುವ ದಿನ) ಎಂಬ ಅಭಿಯಾನದಲ್ಲಿ ₹10 ಕೋಟಿ ಹಣ ಸಂಗ್ರಹವಾಗಿದೆ’ ಎಂದು ಸಂಸ್ಥೆಯ ನಿರ್ದೇಶಕ ಅಲೆಕ್ಸ್ ಕೌನ್ಟ್ಸ್ ಅವರು ಸೋಮವಾರ ಹೇಳಿದ್ದಾರೆ.
‘ಭಾರತದಲ್ಲಿ ಸಾಮಾಜಿಕ ಅಭಿವೃದ್ಧಿಗಾಗಿ ಕೆಲಸ ಮಾಡುವ ಅಮೆರಿಕ ಮೂಲದ 25 ಎನ್‌ಜಿಒಗಳಿಗೆ ಹಣ ನೀಡಲು ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಮಾರ್ಚ್ 2ರಂದು ಈ ಅಭಿಯಾನ ನಡೆದಿತ್ತು. ಸುಮಾರು ಒಂದು ಸಾವಿರ ಮಂದಿ ದೇಣಿಗೆ ನೀಡಿದ್ದಾರೆ’ ಎಂದು ಮಾಹಿತಿ ನೀಡಿದರು.
‘ಮೊದಲ ಬಾರಿಗೆ ಹಮ್ಮಿಕೊಂಡಿದ್ದ ಅಭಿಯಾನದಲ್ಲೇ ಇಷ್ಟೊಂದು ಯಶಸ್ಸು ಸಿಕ್ಕಿದ್ದು ಸಂತಸ ಮೂಡಿಸಿದೆ. ಮುಂದಿನ ದಿನಗಳಲ್ಲಿ ಇಂಥ ಇನ್ನಷ್ಟು ಅಭಿಯಾನಗಳನ್ನು ಹಮ್ಮಿಕೊಳ್ಳಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.