ವಾಷಿಂಗ್ಟನ್ : ಅಮೆರಿಕದ ಕೊಲರಾಡೊದಲ್ಲಿನ ಎರಡು ಭಾರತದ ರೆಸ್ಟೊರೆಂಟ್‌ಗಳು ಹೂಡಿಕೆದಾರರಿಗೆ 38 ಲಕ್ಷ ಡಾಲರ್ (₹3.16 ಕೋಟಿ) ವಂಚಿಸಿವೆ ಎಂದು ಆರೋಪಿಸಲಾಗಿದೆ.
ಈ ಮೊತ್ತವನ್ನು ವಸೂಲಿ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಅಮೆರಿಕದ ಷೇರುಗಳಿಗೆ ಸಂಬಂಧಿಸಿದ ಸಂಸ್ಥೆ ತಿಳಿಸಿದೆ.
ದಿ ಬಾಂಬೆ ಗ್ರೂಪ್ (ಟಿಬಿಜಿ) ಮಾಲಿಕತ್ವದ ಬಾಂಬೆ ಕ್ಲೇ ಅವನ್ ಮತ್ತು ಸಾಸಿ ಬಾಂಬೆ ಎಂಬ ಎರಡು ರೆಸ್ಟಾರಂಟ್‌ಗಳು ತಮ್ಮ ವ್ಯವಹಾರವನ್ನು ದೇಶದಾದ್ಯಂತ ವಿಸ್ತರಿಸುವ ಯೋಜನೆ ಕುರಿತು ಹೂಡಿಕೆದಾರರಿಗೆ ಅರ್ಧ ಸತ್ಯ ಮತ್ತು ಅರ್ಧ ಸುಳ್ಳು ಹೇಳಿ ನಂಬಿಸಿದ್ದರು ಎಂದು ಮೊಕದ್ದಮೆ ದಾಖಲಿಸಲಾಗಿದೆ ಎಂದು ‘ಬ್ಯುಸಿನೆಸ್‌ಡೆನ್’ ವರದಿ ಮಾಡಿದೆ.
ಹೂಡಿಕೆದಾರರು ದಿ ಬಾಂಬೆ ಗ್ರೂಪ್ಅನ್ನು ನಂಬಿ ಹಣ ಹೂಡಿದ್ದರು. ಆದರೆ, ಅವರಿಗೆ ಸತ್ಯ ತಿಳಿಸಿಲ್ಲ ಮತ್ತು ಅವರ ಹಣವನ್ನು ಹಿಂದಿರುಗಿಸಿಲ್ಲ ಎಂದು ಆರೋಪ ಹೊರಿಸಲಾಗಿದೆ ಟಿಬಿಜಿಯಲ್ಲಿ ಯಾರಾದರೂ ಹೂಡಿಕೆ ಮಾಡಿದ್ದರೆ ಕೂಡಲೇ ಭದ್ರತಾ ವಿಭಾಗವನ್ನು ಸಂಪರ್ಕಿಸಿ ಎಂದೂ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.