ADVERTISEMENT

ಟೆಕ್ಸಾಸ್‌: ಸಂಭ್ರಮಾಚರಣೆ ವೇಳೆ ಗುಂಡಿನ ದಾಳಿ– ಇಬ್ಬರ ಸಾವು

ಸಂಭ್ರಮಾಚರಣೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಅಮಾಯಕರು ಮೃತಪಟ್ಟು ಹಲವರು ಗಾಯಗೊಂಡಿರುವ ಘಟನೆ ಅಮೆರಿಕದ ಟೆಕ್ಸಾಸ್ ರಾಜ್ಯದಲ್ಲಿ ನಡೆದಿದೆ.

ಎಪಿ
Published 16 ಜೂನ್ 2024, 11:05 IST
Last Updated 16 ಜೂನ್ 2024, 11:05 IST
<div class="paragraphs"><p>ಟೆಕ್ಸಾಸ್‌: ಸಂಭ್ರಮಾಚರಣೆ ವೇಳೆ ಗುಂಡಿನ ದಾಳಿ– ಇಬ್ಬರ ಸಾವು</p></div>

ಟೆಕ್ಸಾಸ್‌: ಸಂಭ್ರಮಾಚರಣೆ ವೇಳೆ ಗುಂಡಿನ ದಾಳಿ– ಇಬ್ಬರ ಸಾವು

   

ಟೆಕ್ಸಾಸ್, ಅಮೆರಿಕ: ಸಂಭ್ರಮಾಚರಣೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಅಮಾಯಕರು ಮೃತಪಟ್ಟು ಹಲವರು ಗಾಯಗೊಂಡಿರುವ ಘಟನೆ ಅಮೆರಿಕದ ಟೆಕ್ಸಾಸ್ ರಾಜ್ಯದಲ್ಲಿ ನಡೆದಿದೆ.

ಶನಿವಾರ ತಡರಾತ್ರಿ ಟೆಕ್ಸಾಸ್‌ನ ನಾರ್ಥ್ ಆಸ್ಟಿನ್‌ನ ಓಲ್ಡ್ ಸೆಲ್ಟರ್ಸ್ ಪಾರ್ಕ್‌ನಲ್ಲಿ ಈ ಘಟನೆ ನಡೆದಿದೆ.

ADVERTISEMENT

ಓಲ್ಡ್ ಸೆಲ್ಟರ್ಸ್ ಪಾರ್ಕ್‌ನಲ್ಲಿ ಜೂನ್‌ಟಿಂತ್ ಸಂಭ್ರಮಾಚರಣೆ ನಡೆಯುತ್ತಿತ್ತು. ಈ ವೇಳೆ ಎರಡು ಗುಂಪಿನ ನಡುವೆ ವಾಗ್ವಾದ ಆರಂಭವಾಗಿತ್ತು. ಗುಂಪಿನಲ್ಲಿದ್ದ ಅಪರಿಚಿತ ವ್ಯಕ್ತಿ ಗುಂಡಿನ ದಾಳಿ ಮಾಡಿದ್ದ. ಇದರಿಂದ ಇಬ್ಬರು ಸ್ಥಳದಲ್ಲೇ ಮೃತಪಟ್ಟು 9 ಜನ ಗಾಯಗೊಂಡಿದ್ದಾರೆ ಎಂದು ರೌಂಡ್ ರಾಕ್ ಪ್ರದೇಶದ ಪೊಲೀಸ್ ಮುಖ್ಯಸ್ಥ ಅಲೇನ್ ಬ್ಯಾಂಕ್ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.

ಸುದ್ದಿ ತಿಳಿದು ಕೂಡಲೇ ಸ್ಥಳಕ್ಕೆ ಪೊಲೀಸ್ ದೌಡಾಯಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದ್ದರು. ಆದರೆ ಹಂತಕ ನಾಪತ್ತೆಯಾಗಿದ್ದು ಆತನ ಪತ್ತೆಗೆ ನಗರದಲ್ಲಿ ತೀವ್ರ ತಪಾಸಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಘಟನೆಯಲ್ಲಿ ಮೃತಪಟ್ಟವರು ವಾಗ್ವಾದ ನಡೆಸಿದ ಗುಂಪಿಗೆ ಸಂಬಂಧಿಸಿದವರಲ್ಲ ಎಂದು ಅಲೇನ್ ಸ್ಪಷ್ಟಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.