ADVERTISEMENT

ಬರ್ಮಿಂಗ್‌ಹ್ಯಾಮ್‌ | ಎರಡು ಪ್ರತ್ಯೇಕ ಗುಂಡಿನ ದಾಳಿ: 7 ಸಾವು

ಪಿಟಿಐ
Published 14 ಜುಲೈ 2024, 14:13 IST
Last Updated 14 ಜುಲೈ 2024, 14:13 IST
<div class="paragraphs"><p> ಗುಂಡಿನ ದಾಳಿ (ಸಾಂದರ್ಭಿಕ&nbsp; ಚಿತ್ರ)</p></div>

ಗುಂಡಿನ ದಾಳಿ (ಸಾಂದರ್ಭಿಕ  ಚಿತ್ರ)

   

ವಾಷಿಂಗ್ಟನ್: ಬರ್ಮಿಂಗ್‌ಹ್ಯಾಮ್‌ನಲ್ಲಿ ಶನಿವಾರ ನಡೆದ ಎರಡು ಪ್ರತ್ಯೇಕ ಗುಂಡಿನ ದಾಳಿಗಳಲ್ಲಿ ಮಗು ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ ಎಂದು ಅಲಬಾಮ ‍ಪೊಲೀಸರು ತಿಳಿಸಿದರು. 

ಇಲ್ಲಿನ ನೈಟ್‌ಕ್ಲಬ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಮತ್ತೊಂದೆಡೆ, ನಗರದ ಮನೆಯೊಂದರ ಹೊರಗೆ ನಡೆದ ದಾಳಿಯಲ್ಲಿ ಮಗು ಸಹಿತ ಮೂವರು ಸಾವಿಗೀಡಾಗಿದ್ದಾರೆ ಎಂದು ಹೇಳಿದರು.

ADVERTISEMENT

ನೈಟ್‌ಕ್ಲಬ್‌ ಒಂದರಲ್ಲಿ ರಾತ್ರಿ 11 ಗಂಟೆ ನಂತರ ಘಟನೆ ನಡೆದಿದೆ. ದಾಳಿಯಲ್ಲಿ ಒಂಬತ್ತು ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ನೈಟ್‌ಕ್ಲಬ್‌ನ ರಸ್ತೆಯಲ್ಲಿ ನಿಂತು ಒಬ್ಬ ವ್ಯಕ್ತಿ ದಾಳಿ ನಡೆಸಿರಬಹುದು ಎಂದು  ಅಧಿಕಾರಿಗಳು ಅಂದಾಜಿಸಿದ್ದು, ಘಟನೆಗೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿದ್ದಾರೆ ಎಂದರು. 

ಇನ್ನೊಂದು ಘಟನೆಯಲ್ಲಿ, ಕಾರಿನ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ವಾಹನದ ಒಳಗಿದ್ದ ಪುರುಷ, ಮಹಿಳೆ ಹಾಗೂ 5 ವರ್ಷದ ಬಾಲಕ ಗುಂಡಿನ ದಾಳಿಗೆ ತುತ್ತಾಗಿ, ಸ್ಥಳದಲ್ಲೇ ಅಸುನೀಗಿದ್ದಾರೆ ಎಂದು ಅಗ್ನಿಶಾಮಕ ಮತ್ತು ಸಹಾಯಕ ಸಿಬ್ಬಂದಿ ಮಾಹಿತಿ ನೀಡಿದರು ಎಂದು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.