ಕರಾಚಿ: ಪಾಕಿಸ್ತಾನದ ಕರಾಚಿ ಜೈಲಿನಿಂದ ಬಿಡುಗಡೆಯಾದ 20 ಭಾರತೀಯ ಮೀನುಗಾರರನ್ನು ಭಾನುವಾರ ವಾಘಾ ಗಡಿಗೆ ಕಳುಹಿಸಲಾಗುತ್ತಿದ್ದು, ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುವುದು ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಶಿಕ್ಷೆಯ ಅವಧಿ ಪೂರ್ಣಗೊಳಿಸಿ ಜೈಲಿನಲ್ಲಿರುವ 350 ಭಾರತೀಯ ಮೀನುಗಾರರ ಪೈಕಿ ಬಿಡುಗಡೆಯಾದ 20 ಮಂದಿ ಗುಜರಾತ್ ರಾಜ್ಯದವರು. ಉಳಿದವರನ್ನು ಸಹ ಹಂತ ಹಂತವಾಗಿ ಬಿಡುಗಡೆ ಮಾಡಲಾಗುವುದು. ಬಿಡುಗಡೆಯಾದ ಮೀನುಗಾರರನ್ನು ಭಾನುವಾರ ಬೆಳಿಗ್ಗೆ ವಾಘಾ-ಅಟ್ಟಾರಿ ಗಡಿಗೆ ಕಳುಹಿಸಲಾಗುವುದು ಎಂದು ಹಿರಿಯ ಜೈಲು ಅಧಿಕಾರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.