ಮೆಲ್ಬೋರ್ನ್: ಪಪುವಾ ನ್ಯೂ ಗಿನಿಯಲ್ಲಿ ಅಕ್ರಮ ಗಣಿಗಾರರು ಹಿಂಸಾಚಾರ ನಡೆಸುತ್ತಿದ್ದು, ಸುಮಾರು 20ರಿಂದ 50 ಜನರು ಮೃತಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆಯೇ ಘರ್ಷಣೆ ಆರಂಭವಾಗಿದೆ ಮತ್ತು ಅದು ಪೊರ್ಗೆರಾ ಕಣಿವೆಯಲ್ಲಿ ಮುಂದುವರೆದಿದೆ ಎಂದು ಪಪುವಾ ನ್ಯೂ ಗಿನಿ ಸರ್ಕಾರ ತಿಳಿಸಿದೆ.
ಸ್ಥಳೀಯ ಆಡಳಿತ ಮತ್ತು ಸ್ಥಳೀಯರಿಂದ ಮಾಹಿತಿ ಪಡೆದು ಮೃತಪಟ್ಟವರ ಕುರಿತು ಮಾಹಿತಿ ಕಲೆಹಾಕಿರುವ ಪಪುವಾ ನ್ಯೂ ಗಿನಿಯ ವಿಶ್ವಸಂಸ್ಥೆಯ ಸಲಹೆಗಾರ ಮೇಟ್ ಬಗೋಸಿ, ‘20 ಮಂದಿ ಮೃತಪಟ್ಟಿರುವುದನ್ನು ನಾವು ದೃಢಪಡಿಸಿದ್ದೇವೆ. ಈಗಷ್ಟೇ ಸಿಕ್ಕ ಮಾಹಿತಿ ಪ್ರಕಾರ, ಸುಮಾರು 50 ಜನರು ಮೃತಪಟ್ಟಿರುವ ಅಂದಾಜಿದೆ. ಹಿಂಸಾಚಾರ ಇನ್ನೂ ಮುಂದುವರಿದಿದೆ’ ಎಂದು ಹೇಳಿದ್ದಾರೆ. ಆದರೆ, ಗಾಯಗೊಂಡಿರುವವರ ಕುರಿತು ಅವರು ಮಾಹಿತಿ ನೀಡಿಲ್ಲ.
‘ಅಕ್ರಮ ಗಣಿಗಾರರು ಮತ್ತು ಅಕ್ರಮ ನಿವಾಸಿಗಳು ಸ್ಥಳೀಯ ಭೂಮಾಲೀಕರನ್ನು ಬೆದರಿಸಲು ಹಿಂಸಾಚಾರ ನಡೆಸುತ್ತಿರುವ ಕಾರಣ ಪ್ರಕ್ಷುಬ್ಧ ಪರಿಸ್ಥಿತಿ ಉಂಟಾಗಿದೆ. ಸ್ಥಳಕ್ಕೆ ಸೋಮವಾರ ಭದ್ರತಾ ಪಡೆಗಳನ್ನು ಕಳಿಸಲಾಗಿದೆ. ಶನಿವಾರದಿಂದಲೇ ಈ ಗಲಭೆಪೀಡಿತ ಸ್ಥಳದಲ್ಲಿ ತುರ್ತುಪರಿಸ್ಥಿತಿ ಘೋಷಿಸಲಾಗಿದೆ’ ಎಂದು ಅಲ್ಲಿಯ ರಾಷ್ಟ್ರೀಯ ಪೊಲೀಸ್ ಆಯುಕ್ತರು ತಿಳಿಸಿದರು.
*ಅಕ್ರಮ ಗಣಿಗಾರರಿಂದ ಸ್ಥಳೀಯರ ಮೇಲೆ ದಾಳಿ * ಮುಂದುವರಿದ ಹಿಂಸಾಚಾರ, ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.