ಅಬ್ಬಾ... ನೋಡ, ನೋಡುತ್ತಲೇ 2018 ಕಳೆದು ಹೋಯಿತಲ್ಲ. ಸಿಹಿ-ಕಹಿ ನೆನಪುಗಳ ಜತೆಗೆ ಮತ್ತೊಂದು ಹೊಸ ವರ್ಷಕ್ಕೆ ಕಾಲಿಸಿರಿಸುತ್ತಿದ್ದೇವೆ. ಕಳೆದು ಹೋದ ವರ್ಷದತ್ತ ಹಿನ್ನೋಟ ಹರಿಸಿದಾಗ ಹಲವು ಘಟನೆಗಳು ಕಣ್ಮುಂದೆ ಸುಳಿಯುತ್ತವೆ.
ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯ ಅಂಕಣಕಾರ ಜಮಾಲ್ ಖಶೋಗ್ಗಿ ಅವರು ಇಸ್ತಾಂಬುಲ್‌ನ ಸೌದಿ ಕಾನ್ಸುಲೇಟ್ ಕಚೇರಿಯಲ್ಲಿ ಅಕ್ಟೋಬರ್‌ನಲ್ಲಿ ನಿಗೂಢವಾಗಿ ಹತ್ಯೆಯಾದರು. ಸೌದಿ ಯುವರಾಜ ಸಲ್ಮಾನ್ ಅವರ ಆದೇಶದ ಮೇರೆಗೆ ಖಶೋಗ್ಗಿ ಹತ್ಯೆ ನಡೆದಿದೆ ಎಂದು ಅಮೆರಿಕದ ತನಿಖಾ ಸಂಸ್ಥೆ ಸಿಐಎ ವರದಿ ನೀಡಿತು. ಆರಂಭದಲ್ಲಿ ಸೌದಿ ಸರ್ಕಾರ ಇದನ್ನು ಅಲ್ಲಗಳೆದಿತ್ತು. ಸೌದಿ ರಾಜಮನೆತನದ ಪ್ರಮುಖ ಟೀಕಾಕಾರರಲ್ಲಿ ಒಬ್ಬರಾಗಿದ್ದ ಖಶೋಗ್ಗಿ ಹತ್ಯೆಯು ಜಾಗತಿಕ ಮಾಧ್ಯಮಗಳಲ್ಲಿ ಭಾರಿ ಸುದ್ದಿಯಾಗಿತ್ತು. ಇದು ಸೌದಿ–ಅಮೆರಿಕ ನಡುವೆ ರಾಜತಾಂತ್ರಿಕ ಬಿಕ್ಕಟ್ಟಿಗೂ ಕಾರಣವಾಯಿತು.
* ಅಕ್ಟೋಬರ್‌ನಲ್ಲಿ ಶ್ರೀಲಂಕಾದಲ್ಲಿ ರಾಜಕೀಯ ಬಿಕ್ಕಟ್ಟು ತಲೆದೋರಿತು. ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರನ್ನು ಪದಚ್ಯುತಗೊಳಿಸಿದರು. ಆ ಸ್ಥಾನಕ್ಕೆ ಮಹಿಂದ ರಾಜಪಕ್ಸೆ ಅವರನ್ನು ನೇಮಿಸಲಾಯಿತು. ಇದು ಸಾಕಷ್ಟು ಟೀಕೆಗೆ ಕಾರಣವಾಯಿತು. ಅಲ್ಲದೆ ಈ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿತು. ಸಿರಿಸೇನಾ ಹಿನ್ನಡೆ ಅನುಭವಿಸಿದರು. ಕೋರ್ಟ್ ಆದೇಶದಂತೆ ರನಿಲ್ ಅವರು ಮತ್ತೆ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ.
* ಹೆಚ್ಚುತ್ತಿರುವ ಜೀವನವೆಚ್ಚ ಹಾಗೂ ತೈಲಬೆಲೆ ಏರಿಕೆ ವಿರೋಧಿಸಿ ಡಿಸೆಂಬರ್‌ನಲ್ಲಿ ಫ್ರಾನ್ಸ್‌ನಲ್ಲಿ ಭಾರಿ ಪ್ರತಿಭಟನೆ ನಡೆಯಿತು. ಇದು ಹಿಂಸೆಗೆ ತಿರುಗಿತು
* ಜ್ವಾಲಾಮುಖ ಸ್ಫೋಟದಿಂದ ಇಂಡೊನೇಷ್ಯಾದಲ್ಲಿ ಡಿಸೆಂಬರ್‌ನಲ್ಲಿ ಸಂಭವಿಸಿದ ಸುನಾಮಿಗೆ ಸುಮಾರು 430 ಮಂದಿ ಮೃತಪಟ್ಟರು.
* ಉತ್ತರ ಕೊರಿಯಾ ಆಧ್ಯಕ್ಷ ಕಿಮ್ ಉನ್ ಜಾಂಗ್ ಅವರು ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಇನ್ ಅವರನ್ನು ಮೊದಲ ಬಾರಿಗೆ ಭೇಟಿ ಮಾಡಿದರು.
* ಉತ್ತರ ಕೊರಿಯಾ ಆಧ್ಯಕ್ಷ ಕಿಮ್ ಉನ್ ಜಾಂಗ್ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಜೂನ್‌ನಲ್ಲಿ ಸಿಂಗಪುರದಲ್ಲಿ ಭೇಟಿಯಾದರು. ಸದಾ ವೈರಿಗಳಂತೆ ಇದ್ದ ಎರಡೂ ದೇಶಗಳು ಸ್ನೇಹ ಪ್ರದರ್ಶಿಸಿದವು. ತನ್ನಲ್ಲಿರುವ ಅಣ್ವಸ್ತ್ರಗಳನ್ನು ತೊರೆಯಲು ಉತ್ತರ ಕೊರಿಯಾ ಸಮ್ಮತಿಸಿತು.
* ಇರಾನ್ ಜೊತೆಗಿನ ಪರಮಾಣು ಒಪ್ಪಂದವನ್ನು ಮೇ ತಿಂಗಳಲ್ಲಿ ಅಮೆರಿಕ ಮುರಿದುಕೊಂಡಿತು. ಒಪ್ಪಂದ ಏಕಮುಖವಾಗಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಾದಿಸಿದರು. ಚುನಾವಣೆಯಲ್ಲಿ ನೀಡಿದ್ದ ಭರವಸೆಯಂತೆ ಅವರು ಒಪ್ಪಂದಕ್ಕೆ ಅಂತ್ಯ ಹಾಡಿದರು. ಅಲ್ಲದೆ ಇರಾನ್ ವಿರುದ್ಧ ಹಲವು ದಿಗ್ಬಂಧನಗಳನ್ನೂ ಹೇರಿದರು.
* ಅಮೆರಿಕದ ಖಾಸಗಿ ಬಾಹ್ಯಾಕಾಶ ಸಂಸ್ಥೆ ಸ್ಪೇಸ್‌ಎಕ್ಸ್, ಫಬ್ರುವರಿ ತಿಂಗಳಿನಲ್ಲಿ ಭಾರೀ ತೂಕದ ಫಾಲ್ಕನ್ ರಾಕೆಟ್ ಅನ್ನು ಮೊದಲ ಬಾರಿಗೆ ಉಡಾವಣೆ ಮಾಡಿತು.
* ಇಂಗ್ಲೆಂಡ್‌ನಲ್ಲಿ ವಾಸವಿದ್ದ ರಷ್ಯಾದ ಮಾಜಿ ಗೂಢಚಾರ ಸರ್ಗೆ ಸ್ಕ್ರಿಪಾಲ್ ಹಾಗೂ ಅವರ ಮಗಳಿಗೆ ಭಯಂಕರ ರಾಸಾಯನಿಕ ವಿಷವನ್ನು ಹಾಕಲಾಗಿತ್ತು. ಇದಕ್ಕೆ ರಷ್ಯಾ ಕಾರಣ ಎಂದು ಅಮೆರಿಕ ಆರೋಪಿಸಿತ್ತು.
* ಇದೇ ಏಪ್ರಿಲ್‌ನಲ್ಲಿ ಬಂಡುಕೋರರ ಹಿಡಿತದಲ್ಲಿದ್ದ ಸಿರಿಯಾದಲ್ಲಿ ನಡೆದ ರಾಸಾಯನಿಕ ದಾಳಿಗೆ ಸುಮಾರು 80 ನಾಗರಿಕರು ಮೃತಪಟ್ಟಿದ್ದರು. ಆದರೆ ರಾಸಾಯನಿಕ ದಾಳಿ ನಡೆಸಿರುವುದನ್ನು ಸಿರಿಯಾ ನಿರಾಕರಿಸಿತ್ತು.
* ಜುಲೈ 15ರಂದು ಅಮೆರಿಕದ ಯುವರಾಜ ಹ್ಯಾರಿ ಅವರು ಚಿತ್ರನಟಿ ಮೇಘನ್ ಮಾರ್ಕೆಲ್ ಜೊತೆ ವಿವಾಹವಾದರು. ಈ ರಾಯಲ್ ವೆಡ್ಡಿಂಗ್ ಜಗತ್ತಿನ ಗಮನ ಸೆಳೆಯಿತು.
* ಇವನ್ನೂ ಓದಿ...
*ಹಿನ್ನೋಟ 2018: ನೆನಪುಗಳನ್ನು ಬಿಟ್ಟು ಹೋದವರು...
*ಹಿನ್ನೋಟ 2018: ಸಿಹಿ, ಕಹಿ ನೆನಪುಗಳನ್ನು ಉಳಿಸಿಹೋದ ವರುಷ
* ಹಿನ್ನೋಟ 2018: ಸುಪ್ರೀಂ ಕೋರ್ಟ್ನ ಐತಿಹಾಸಿಕ ತೀರ್ಪುಗಳು
*ಹಿನ್ನೋಟ 2018: ಹೈಕೋರ್ಟ್ ಅಂಗಳದಲ್ಲಿ....
*ಹಿನ್ನೋಟ 2018: ಚುನಾವಣೆ– ಕಾಂಗ್ರೆಸ್ಗೆ ಸಿಹಿ, ಬಿಜೆಪಿಗೆ ಕಹಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.