ವಿಶ್ವಸಂಸ್ಥೆ: ಭಾರತದ ಜನಸಂಖ್ಯೆ ಮುಂದಿನ ಏಳು ವರ್ಷಗಲ್ಲಿ 144 ಕೋಟಿ ದಾಟುವ ಮೂಲಕ ಚೀನಾಗಿಂತಲೂ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಲಿದೆ ಎಂದು ವಿಶ್ವಸಂಸ್ಥೆ ವರದಿ ತಿಳಿಸಿದೆ.
2017ರ ವಿಶ್ವ ಜನಸಂಖ್ಯಾ ಹೊರನೋಟ ಪರಿಷ್ಕೃತ ವರದಿ ಬುಧವಾರ ಬಿಡುಗಡೆಯಾಗಿದೆ. ಇದರ ಪ್ರಕಾರ, ಕಳೆದ 40 ವರ್ಷಗಳಲ್ಲಿ ಭಾರತೀಯರ ಜನನ ಪ್ರಮಾಣ ಅರ್ಧದಷ್ಟು ಕಡಿಮೆಯಾಗಿದೆ.
ಪ್ರಸ್ತುತ ಜನನ ಪ್ರಮಾಣ 2.3ರಷ್ಟಿದೆ ಹಾಗೂ ಕಳೆದ 25 ವರ್ಷಗಳಲ್ಲಿ ಜೀವಿತಾವಧಿ ಹತ್ತು ವರ್ಷಗಳಷ್ಟು ಸೇರ್ಪಡೆಯಾಗಿದ್ದು, 69 ವರ್ಷಕ್ಕೆ ಸಮೀಪಿಸಿದೆ.
134 ಕೋಟಿ ಇರುವ ಭಾರತದ ಜನಸಂಖ್ಯೆ 2024ರ ವೇಳೆಗೆ 144 ಕೋಟಿ ಮುಟ್ಟಲಿದೆ. ಪ್ರಸ್ತುತ 141 ಕೋಟಿ ಇರುವ ಚೀನಾದ ಜನಸಂಖ್ಯೆ ಸ್ಥಿರತೆ ಕಾಯ್ದುಕೊಳ್ಳಲಿದ್ದು, ಭಾರತದ ಜನಸಂಖ್ಯೆ ಹೆಚ್ಚಲಿದೆ. 2050ರ ವೇಳೆಗೆ ಭಾರತದ ಜನಸಂಖ್ಯೆ 166 ಕೋಟಿಯಾಗುವುದಾಗಿ ನಿರೀಕ್ಷಿಸಲಾಗಿದೆ.
ವಿಶ್ವ ಜನಸಂಖ್ಯೆ 760 ಕೋಟಿಯಿದ್ದು, 2030ಕ್ಕೆ 860 ಕೋಟಿ ದಾಟಲಿದೆ ಎಂದು ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.