ಜೇರುಸಲೆಂ: ‘ಇಸ್ರೇಲ್ ರಾಜಧಾನಿ ಜೇರುಸಲೆಂನಲ್ಲಿ ಸುಮಾರು 2,700 ವರ್ಷದ ಹಳೆಯದಾದ ಶೌಚಾಲಯ ಪತ್ತೆಯಾಗಿದೆ‘ ಎಂದು ಅಲ್ಲಿನ ಪುರಾತನ ಇಲಾಖೆ ಹೇಳಿದೆ.
ಶೌಚಾಲಯದ ಫೋಟೊಗಳನ್ನು ಬಿಡುಗಡೆ ಮಾಡಿರುವ ಅಲ್ಲಿನ ಸ್ಥಳೀಯಾಡಳಿತ, ‘2,700 ವರ್ಷಗಳ ಹಿಂದೆಯ ಈ ಪುರಾತನ ಶೌಚಾಲಯ ನಿರ್ಮಾಣವಾಗಿರುವುದು ಖಾತ್ರಿಯಾಗಿದೆ. ನಗರದಲ್ಲಿ ಖಾಸಗಿಯಾದ ಹಾಗೂ ಈಗಿನ ಕಾಲದಂತೆ ಶೌಚಾಲಯಗಳು ಇದ್ದವು ಎಂಬುದನ್ನು ತೋರಿಸಿದೆ‘ ಎಂದು ಹೇಳಿದೆ.
‘ಕಲ್ಲನ್ನು ಕತ್ತರಿಸಿ ಆರಾಮವಾಗಿ ಕುಳಿತುಕೊಳ್ಳಲು ಆಯತಾಕಾರದಲ್ಲಿ ಮಾಡಲಾದ ಶೌಚಾಲಯ ಇದಾಗಿದ್ದು ಇದರ ಕೆಳಗೆ ಸೆಪ್ಟಿಕ್ ಟ್ಯಾಂಕ್ ಕೂಡ ಪತ್ತೆಯಾಗಿದೆ‘ ಎಂದು ಉತ್ಖನನ ಕೈಗೊಂಡ ಅಧಿಕಾರಿಗಳು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಇಸ್ರೇಲ್ ಪುರಾತನ ಇಲಾಖೆಯ ಯಾಕೋವ್ ಬಿಲ್ಲಿಗ್ ಅವರು, ‘ಪುರಾತನ ಶೌಚಾಲಯ ಪತ್ತೆಯಾಗಿರುವ ಜಾಗದಲ್ಲಿ ಇನ್ನೂ ಕೂಡ ಉತ್ಕನನ ಮುಂದುವರೆದಿದೆ. ಈಗ ಸಿಕ್ಕಿರುವ ಪಳಿಯುಳಿಕೆಗಳನ್ನು ನೋಡಿದರೆ ಜೇರುಸಲೆಂನಲ್ಲಿ ಶ್ರೀಮಂತರು ವಾಸವಾಗಿದ್ದರು ಎಂಬುದು ಸ್ಪಷ್ಟವಾಗುತ್ತದೆ. ಏಕೆಂದರೆ, ಈಗ ಕಂಡು ಬಂದಿರುವ ಶೌಚಾಲಯ ಶ್ರೀಮಂತರು ಬಳಸುವ ಶೌಚಾಲಯದ ರೀತಿ ಇದೆ‘ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.