ADVERTISEMENT

ಪಂಜಾಬ್‌ನಲ್ಲಿ ಅಧಿಕಾರಕ್ಕೆ ಬಂದರೆ 300 ಯೂನಿಟ್‌ ಉಚಿತ ವಿದ್ಯುತ್‌: ಕೇಜ್ರಿವಾಲ್

ಪಿಟಿಐ
Published 29 ಜೂನ್ 2021, 9:48 IST
Last Updated 29 ಜೂನ್ 2021, 9:48 IST
ಅರವಿಂದ್‌ ಕೇಜ್ರಿವಾಲ್‌
ಅರವಿಂದ್‌ ಕೇಜ್ರಿವಾಲ್‌   

ಚಂಡೀಗಡ: ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಗೆದ್ದರೆ, ಪ್ರತಿಯೊಂದು ಮನೆಗೂ ಪ್ರತಿ ತಿಂಗಳು 300 ಯೂನಿಟ್‌ ಉಚಿತ ವಿದ್ಯುತ್‌ ಪೂರೈಕೆ ಮಾಡುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಭರವಸೆ ನೀಡಿದ್ದಾರೆ.

‌ಚಂಡೀಗಡದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಎಎಪಿ ಅಧಿಕಾರಕ್ಕೆ ಬಂದರೆ ಪಂಜಾಬ್‌ನಲ್ಲಿ 24 ಗಂಟೆಗಳ ಕಾಲ ವಿದ್ಯುತ್‌ ಪೂರೈಕೆ ಮಾಡಲಾಗುವುದು ಮತ್ತು ಬಾಕಿ ಇರುವ ವಿದ್ಯುತ್ ಬಿಲ್‌ಗಳನ್ನು ಮನ್ನಾ ಮಾಡುವುದಾಗಿ ಹೇಳಿದರು.

‘ಪಂಜಾಬ್‌ನಲ್ಲಿ ವಿದ್ಯುತ್‌ ಉತ್ಪಾದಿಸಲಾಗುತ್ತದೆ. ಆದರೂ ದೇಶದಲ್ಲಿ ಪಂಜಾಬ್‌ನಲ್ಲಿಯೇ ವಿದ್ಯುತ್‌ ಅತಿ ಹೆಚ್ಚು ದುಬಾರಿ. ಅದೇ ದೆಹಲಿಯಲ್ಲಿ ವಿದ್ಯುತ್‌ ಅನ್ನು ಬೇರೆ ದೇಶಗಳಿಂದ ಖರೀದಿಸಲಾಗುತ್ತದೆ. ಆದರೂ ಅತಿ ಕಡಿಮೆ ಬೆಲೆಯಲ್ಲಿ ಜನರಿಗೆ ನೀಡಲಾಗುತ್ತದೆ’ ಎಂದು ಅವರು ತಿಳಿಸಿದರು.

ADVERTISEMENT

ಈ ವೇಳೆ ಎಎಪಿಯ ಪಂಜಾಬ್ ಘಟಕದ ಮುಖ್ಯಸ್ಥ ಭಗವಂತ್ ಮನ್, ಪಕ್ಷದ ಪಂಜಾಬ್ ವ್ಯವಹಾರಗಳ ಅಧ್ಯಕ್ಷ ಜರ್ನೈಲ್ ಸಿಂಗ್, ಶಾಸಕ ಹರ್ಪಾಲ್ ಸಿಂಗ್ ಚೀಮಾ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.