ADVERTISEMENT

ಕೀನ್ಯಾದ ತೆರಿಗೆ ವಿರೋಧಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ 39 ಮಂದಿ ಸಾವು: ವರದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಜುಲೈ 2024, 2:49 IST
Last Updated 2 ಜುಲೈ 2024, 2:49 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನೈರೋಬಿ(ಕೀನ್ಯಾ): ‌ಹೊಸ ತೆರಿಗೆ ಹೆಚ್ಚಳದ ವಿರುದ್ಧ ಕೀನ್ಯಾದಲ್ಲಿ ಜೂನ್ 18ರಿಂದ ಜುಲೈ 1ರವರೆಗೆ ನಡೆದ ಭಾರಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಕನಿಷ್ಠ 39 ಮಂದಿ ಜೀವ ಕಳೆದುಕೊಂಡಿದ್ದಾರೆ ಎಂದು ಅಲ ಜಝೀರಾ ವರದಿ ಮಾಡಿದೆ.

ಮೃತರ ಸಂಖ್ಯೆಯನ್ನು ಕೀನ್ಯಾದ ಮಾನವ ಹಕ್ಕುಗಳ ರಾಷ್ಟ್ರೀಯ ಆಯೋಗ(ಕೆಎನ್‌ಸಿಎಚ್‌ಆರ್) ಸೋಮವಾರ ಪ್ರಕಟಿಸಿದೆ. ಇದು ಈ ಹಿಂದೆ ಸರ್ಕಾರ ಪ್ರಕಟಿಸಿದ್ದ ಸಂಖ್ಯೆಗಿಂತ ದುಪ್ಪಟ್ಟಾಗಿದೆ.

ಈ ನಡುವೆ ಈ ವಾರ ಎರಡನೇ ಸುತ್ತಿನ ಪ್ರತಿಭಟನೆಯನ್ನು ಹೋರಾಟಗಾರರು ಹಮ್ಮಿಕೊಂಡಿದ್ದಾರೆ. ಇಲ್ಲಿನ ಸರ್ಕಾರ ತೆರಿಗ ನಿರ್ಧಾರವನ್ನು ಹಿಂಪಡೆಯಲಾಗಿದೆ.

ADVERTISEMENT

ಕೆಲವರನ್ನು ಒತ್ತಾಯಪೂರ್ವಕವಾಗಿ ಕರೆದೊಯ್ದು ಈಗ ಅವರು ನಾಪತ್ತೆಯಾಗಿರುವ 32 ಪ್ರಕರಣಗಳು ಸಹ ಕಂಡುಬಂದಿವೆ ಎಂದೂ ಅದು ಹೇಳಿದೆ. 627 ಮಂದಿಯನ್ನು ಬಂಧಿಸಲಾಗಿದೆ.

ಇದಲ್ಲದೆ, ಬಹುತೇಕ ಯುವ ಪ್ರತಿಭಟನಾಕಾರರ ನೇತೃತ್ವದಲ್ಲಿ ನಡೆಯುತ್ತಿದ್ದ ಶಾಂತಿಯುತ ತೆರಿಗೆ ವಿರೋಧಿ ರ್‍ಯಾಲಿಗಳು ಕಳೆದ ಮಂಗಳವಾರ ವಿವಾದಾತ್ಮಕ ಕಾಯ್ದೆ ಅಂಗೀಕರಿಸಿದ ಬೆನ್ನಲ್ಲೇ ಹಿಂಸಾರೂಪಕ್ಕೆ ತಿರುಗಿತ್ತು.

ಕೇಂದ್ರ ನೈರೋಬಿಯ ಸಂಸತ್ ಭವನದ ಆವರಣಕ್ಕೆ ನುಗ್ಗಿದ್ದ ಪ್ರತಿಭಟನಾಕಾರರು ಸಂಸತ್ತಿನ ಒಂದು ಭಾಗಕ್ಕೆ ಬೆಂಕಿ ಹಚ್ಚಿದ್ದರು. ಈ ಸಂದರ್ಭ ಗುಂಪು ಚದುರಿಸಲು ಪೊಲೀಸರು ಗೋಲಿಬಾರ್ ನಡೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.