ADVERTISEMENT

ಚೀನಾ: 40 ವಿದ್ಯಾರ್ಥಿಗಳ ಮೇಲೆ ಚೂರಿ ಇರಿತ

ಪಿಟಿಐ
Published 4 ಜೂನ್ 2020, 19:30 IST
Last Updated 4 ಜೂನ್ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೀಜಿಂಗ್‌: ಚೀನಾದ ಪ್ರಾಥಮಿಕ ಶಾಲೆವೊಂದರಭದ್ರತಾ ಸಿಬ್ಬಂದಿ 40 ವಿದ್ಯಾರ್ಥಿಗಳಿಗೆ ಹಾಗೂ ಶಾಲಾ ಸಿಬ್ಬಂದಿಗೆ ಚೂರಿ ಇರಿದ ಧಾರುಣ ಘಟನೆ ಗುರುವಾರ ನಡೆದಿದೆ.

ದಕ್ಷಿಣ ಗ್ವಾಂಗಕ್ಸಿ ಪ್ರದೇಶದ ವಂಗ್‌ಫು ನಗರದ, ವಂಗ್‌ಫು ಟೌನ್‌ ಕೇಂದ್ರ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಬೆಳಿಗ್ಗೆ 8.30ಕ್ಕೆ ಈ ಘಟನೆ ನಡೆದಿದೆ.‌ ಚಾಕು ಇರಿದ 50 ವರ್ಷದ ಭದ್ರತಾ ಸಿಬ್ಬಂದಿ ಲೀ ಜಿಯೋಮಿನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಪ್ರಾರಂಭಿಸಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ.

ಘಟನೆಯಲ್ಲಿ ಶಾಲೆಯ ಪ್ರಾಚಾರ್ಯ, ಮತ್ತೊಬ್ಬ ಭದ್ರತಾ ಸಿಬ್ಬಂದಿ ಹಾಗೂ ಒಬ್ಬ ವಿದ್ಯಾರ್ಥಿ ತೀವ್ರವಾಗಿ ಗಾಯಗೊಂಡಿದ್ದಾರೆ. 8 ಅಂಬುಲೆನ್ಸ್‌ಗಳ ಮೂಲಕ ಗಾಯಾಳುಗಳನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಥಳೀಯ ಆಡಳಿತ ಹೇಳಿದೆ.

ADVERTISEMENT

‘ಬೆಳಿಗ್ಗೆಸುಮಾರು 8.30ಕ್ಕೆ ಮಕ್ಕಳು ಅಳುವ ಮತ್ತು ಕಿರುಚುವ ಶಬ್ದ ಕೇಳಿಸಿತು. ನಮ್ಮ ಮನೆ ಶಾಲೆಯ ಹತ್ತಿರವೇ ಇದೆ. ಒಬ್ಬ ಮನುಷ್ಯ ಚಾಕು ಹಿಡಿದು ಮಕ್ಕಳ ಮೇಲೆ ಇರಿಯುತ್ತಿದ್ದಾನೆ ಎಂದು ಶಾಲೆಯ ಪಕ್ಕದಲ್ಲೇ ನಿಂತಿದ್ದ ವ್ಯಕ್ತಿ ಹೇಳಿದ. ತಕ್ಷಣ ನನ್ನ ಮಗನನ್ನು ಕರೆದುಕೊಂಡು ಬರಲು ಶಾಲೆಗೆ ಓಡಿದೆ. ಅದೃಷ್ಟವಶಾತ್‌ ನನ್ನ ಮಗ ಸ್ವಲ್ಪ ಹೆದರಿದ್ದಾನೆ. ಆದರೆ, ಯಾವುದೇ ಗಾಯಗಳಾಗಿಲ್ಲ‍’ ಎಂದು ಪೋಷಕರೊಬ್ಬರು ಘಟನೆಯನ್ನು ವಿವರಿಸಿದರು.

ಇತ್ತೀಚಿನ ಕೆಲವು ವರ್ಷಗಳಲ್ಲಿ ಚೀನಾದ ವಿವಿಧೆಡೆ ಇಂತಹ ಘಟನೆಗಳು ಸಾಮಾನ್ಯವೆಂಬತೆ ಆಗುತ್ತಿವೆ. ಅತೃಪ್ತ, ಅಸಂತುಷ್ಟ ವ್ಯಕ್ತಿಗಳು ತಮ್ಮ ಸಿಟ್ಟು, ಒತ್ತಡಗಳನ್ನು ಹೊರಹಾಕಲು ಇಂತಹ ಕೃತ್ಯಗಳನ್ನು ಎಸಗುತ್ತಿದ್ದಾರೆ. ಈ ವ್ಯಕ್ತಿಗಳು ಹೆಚ್ಚಾಗಿ ಶಿಶು ವಿಹಾರ, ಪ್ರಾಥಮಿಕ ಶಾಲೆ ಹಾಗೂ ಸಾರ್ವಜನಿಕ ಸಾರಿಗೆಯನ್ನೇ ಗುರಿಯಾಗಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.