ವಾಷಿಂಗ್ಟನ್: ಭೂಮಿಯ ದಟ್ಟ ವಾತಾವರಣದ ಹೊರಗೆ ಕೃತಕ ಉಪಗ್ರಹದಂತೆ ಧರೆಯನ್ನು ಪರಿಭ್ರಮಿಸುತ್ತ ವ್ಯೋಮ–ವೀಕ್ಷಣೆ ನಡೆಸುತ್ತಿರುವ ಹಬಲ್ ಬಾಹ್ಯಾಕಾಶ ದೂರದರ್ಶಕ ದಟ್ಟವಾದ ಗ್ಯಾಲಕ್ಸಿಯ ಚಿತ್ರವನ್ನು ಸೆರೆ ಹಿಡಿದಿದೆ.
‘ಯುಜಿಸಿ 12591’ ಎಂದು ಹೆಸರಿಸಲಾಗಿರುವ ಗ್ಯಾಲಕ್ಸಿ ಮತ್ತು ಅದರ ಪ್ರಭಾವಲಯವು ಸೂರ್ಯನಿಗಿಂತ ನೂರಾರು ಕೋಟಿ ಪಟ್ಟು ಅಧಿಕ ರಾಶಿ ಹೊಂದಿದೆ. ಇದು ನಮ್ಮ ನಕ್ಷತ್ರ ಪುಂಜ ‘ಕ್ಷೀರ ಪಥ’ಕ್ಕಿಂತ ನಾಲ್ಕು ಪಟ್ಟು ದಟ್ಟವಾಗಿದೆ ಎಂದು ನಾಸಾ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.