ADVERTISEMENT

ಪೂರ್ವ ಚೀನಾದಲ್ಲಿ ಭಾರಿ ಮಳೆ; ಐದು ಮಂದಿ ಸಾವು

ಎಪಿ
Published 23 ಜುಲೈ 2023, 14:34 IST
Last Updated 23 ಜುಲೈ 2023, 14:34 IST
.
.   

ಬೀಜಿಂಗ್‌ : ಪೂರ್ವ ಚೀನಾದ ಫುಯಾಂಗ್ ಜಿಲ್ಲೆಯಲ್ಲಿ ಶನಿವಾರ ಮಧ್ಯಾಹ್ನ ಸುರಿದ ಭಾರಿ ಮಳೆಯಿಂದ ಉಂಟಾದ ಪ್ರವಾಹದಲ್ಲಿ ಈ ವರೆಗೆ 5 ಜನರು ಮೃತಪಟ್ಟು, ಇಬ್ಬರು ನಾಪತ್ತೆಯಾಗಿದ್ದಾರೆ ಎಂದು ಚೀನಾ ರಾಜ್ಯದ ರೇಡಿಯೋ ಭಾನುವಾರ ವರದಿ ಮಾಡಿದೆ.

ಫ್ಯುಯಾಂಗ್ ಜಿಲ್ಲೆಯ ಹ್ಯಾಂಗ್ ಝೌ ನಗರದ ಜನವಸತಿ ಪ್ರದೇಶ ಜಲಾವೃತಗೊಂಡಿದೆ. ರಕ್ಷಣಾ ಸಿಬ್ಬಂದಿ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ವರದಿ ತಿಳಿಸಿದೆ.  

ಈಶಾನ್ಯ ಪ್ರಾಂತ್ಯದ ಲಿಯಾನಿಂಗ್‌ನಲ್ಲಿ ನದಿಗಳು ತುಂಬಿ ಹರಿಯುತ್ತಿದ್ದು, 5,590 ಜನರನ್ನು ಸ್ಥಳಾಂತರಿಸಲಾಗಿದೆ. ಸುಮಾರು 30 ಮನೆಗಳು ಮತ್ತು 54 ಹೆಕ್ಟೇರ್‌ ಬೆಳೆ ನಾಶವಾಗಿದೆ ಎಂದು ಸಿಸಿಟಿವಿ ಭಾನುವಾರ ತಿಳಿಸಿದೆ.

ADVERTISEMENT

ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಕೆಲವು ನಿವಾಸಿಗಳು ಮನೆಗಳಲ್ಲಿ ಸಿಲುಕಿಕೊಂಡಿದ್ದಾರೆ.  ಹುಬೈನ ಮಧ್ಯ ಪ್ರಾಂತ್ಯದಲ್ಲಿ 220 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಸರ್ಕಾರಿ ಸುದ್ದಿಸಂಸ್ಥೆ ವರದಿ ಮಾಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.