ಬೀಜಿಂಗ್: ಟಿಬೆಟ್ಟನ್ನರ ಧರ್ಮಗುರು ದಲೈ ಲಾಮ ಅವರು ಪಲಾಯನ ಮಾಡಿ 60 ವರ್ಷದ ನಂತರವೂ ಟಿಬೆಟ್ ಕುರಿತ ನೀತಿಗಳನ್ನು ಚೀನಾ ಸಮರ್ಥನೆ ಮಾಡಿಕೊಂಡಿದೆ.
ಆರ್ಥಿಕ ಪ್ರಗತಿ, ಜೀವಿತಾವಧಿ ಹೆಚ್ಚಳ ಮತ್ತು ಉತ್ತಮ ಶಿಕ್ಷಣ ಸೌಲಭ್ಯದ ಬಗೆಗಿನ ಟೀಕೆಗಳ ರೀತಿ ಪರಿಸ್ಥಿತಿ ಇಲ್ಲ ಎಂದು ಅಧಿಕೃತ ಸುದ್ದಿಸಂಸ್ಥೆ ಕ್ಸಿನುವ್ಹಾ ವರದಿ ಮಾಡಿದೆ.
ಹಿಮಾಲಯದ ಸೆರಗಿನಲ್ಲಿರುವ ಟಿಬೆಟ್‌ನ ಸಂಪನ್ಮೂಲಗಳನ್ನು ಚೀನಾ ತನ್ನ ಲಾಭಕ್ಕಾಗಿ ಶೋಷಿಸುತ್ತಿದೆ ಎಂದು ವಿದೇಶಗಳಲ್ಲಿರುವ ಟಿಬೆಟನ್ನರು ಟೀಕಿಸಿದ್ದಾರೆ. ಟಿಬೆಟ್‌ನ ವಿಶಿಷ್ಟ ಬೌದ್ಧ ಸಂಸ್ಕೃತಿ ಸಹ ನಾಶವಾಗುತ್ತಿದೆ ಎಂದು ಹೇಳಿದ್ದಾರೆ.
‘ಅಭಿವೃದ್ಧಿ ಕುರಿತ ಸುಳ್ಳು ಮಾಹಿತಿ ಮತ್ತು ಅಂಕಿ ಅಂಶಗಳನ್ನೇ ಪುನರಾವರ್ತಿಸಿ ಸುಳ್ಳು ಆರೋಪ ಮಾಡಲಾಗುತ್ತಿದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.