ವೆಲ್ಲಿಂಗ್ಟನ್: ಪೆಸಿಫಿಕ್ ಸಾಗರದ ಲಾಯಲ್ಟಿ ದ್ವೀಪಗಳ ಬಳಿ ಶುಕ್ರವಾರ 7.7ರ ತೀವ್ರತೆಯ ಭೂಕಂಪನ ಸಂಭವಿಸಿದ್ದು, ಯಾವುದೇ ಹಾನಿಯಾದ ವರದಿಗಳು ಆಗಿಲ್ಲ.
ಭೂಕಂಪನವಾದ ಕೂಡಲೇ ವನವಾಟು, ನ್ಯೂ ಕಾಲೆಡೋನಿಯಾ, ನ್ಯೂಜಿಲೆಂಡ್ ಸೇರಿದಂತೆ ಪೆಸಿಫಿಕ್‌ನ ದ್ವೀಪಗಳಿಗೆ ಸಣ್ಣ ಅಲೆಗಳ ಸುನಾಮಿ ಎಚ್ಚರಿಕೆ ನೀಡಲಾಗಿತ್ತು.
ಲಾಯಲ್ಟಿ ದ್ವೀಪಗಳ ಆಗ್ನೇಯ ಭಾಗದಲ್ಲಿ ಸುಮಾರು 37 ಕಿ.ಮೀ ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ಇತ್ತು ಎಂದು ಅಮೆರಿಕದ ಭೂಗರ್ಭ ಇಲಾಖೆ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.