ADVERTISEMENT

27 ದೇಶಗಳಲ್ಲಿ 780 ಮಂಕಿಪಾಕ್ಸ್‌ ಪ್ರಕರಣ ಪತ್ತೆ: ಡಬ್ಲ್ಯುಎಚ್‌ಒ

ಯುರೋಪ್‌, ಉತ್ತರ ಅಮೆರಿಕದಲ್ಲಿ ಸೋಂಕು ಸ್ಫೋಟ

ಪಿಟಿಐ
Published 6 ಜೂನ್ 2022, 12:48 IST
Last Updated 6 ಜೂನ್ 2022, 12:48 IST
ಮಂಕಿಪಾಕ್ಸ್‌ –ಎಎಫ್‌ಪಿ
ಮಂಕಿಪಾಕ್ಸ್‌ –ಎಎಫ್‌ಪಿ   

ವಿಶ್ವಸಂಸ್ಥೆ/ಜಿನೆವಾ: ಮೇ 13ರಿಂದ ಜೂನ್‌ 2ರವರೆಗೆ 27 ರಾಷ್ಟ್ರಗಳಲ್ಲಿ ಒಟ್ಟು 780 ಮಂಕಿಪಾಕ್ಸ್‌ ಪ್ರಕರಣಗಳು ಪತ್ತೆಯಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ತಿಳಿಸಿದೆ.

ಹಾಗೆಯೇ ಆಫ್ರಿಕಾ ಖಂಡದ ಏಳು ದೇಶಗಳಲ್ಲಿ ಈ ವರ್ಷ ಜೂನ್‌ 1ರವರೆಗೆ 44 ಪ್ರಕರಣಗಳು ಮತ್ತು 1,408 ಶಂಕಿತ ಪ್ರಕರಣಗಳು ಪತ್ತೆಯಾಗಿವೆ. ಅಲ್ಲದೆ 66 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿಸಿದೆ.

ಸಾಂಕ್ರಾಮಿಕ ಕುರಿತ ತನಿಖೆ ಪ್ರಗತಿಯಲ್ಲಿದೆ. ಈವರೆಗೆ ದೃಢಪಟ್ಟ ಹಲವು ಪ್ರಕರಣಗಳಲ್ಲಿ ಪಶ್ಚಿಮ ಆಫ್ರಿಕಾ ಮೂಲದ ತಳಿ ಪತ್ತೆಯಾಗಿದೆ. ಆಫ್ರಿಕಾದ ದಟ್ಟಕಾಡುಗಳಲ್ಲಿ ಹೆಚ್ಚಾಗಿ ಕಂಡುಬರುವ ಸಿಡುಬು ವರ್ಗಕ್ಕೆ ಸೇರಿದ ಈ ವೈರಸ್‌ ಯುರೋಪ್‌ ಮತ್ತು ಉತ್ತರ ಅಮೆರಿಕದಲ್ಲೂ ಪತ್ತೆಯಾಗುತ್ತಿದೆ. ಆಫ್ರಿಕಾ ದೇಶಗಳಿಗೆ ಪ್ರಯಾಣಿಸದವರಲ್ಲೂ ಪತ್ತೆಯಾಗುತ್ತಿರುವುದರಿಂದ ಇದನ್ನು ಸಾಂಕ್ರಾಮಿಕ ಸ್ಫೋಟ ಎಂದು ಪರಿಗಣಿಸಲಾಗುತ್ತದೆ ಎಂದು ಎಚ್ಚರಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.