ಮೆಕ್ಸಿಕೋ: ಮೆಕ್ಸಿಕೋ ನಗರದ ದಕ್ಷಿಣ ಭಾಗದಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ 8 ಜನ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮತ್ತು ರಾಜ್ಯ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಮೆಕ್ಸಿಕೋ ನಗರದ ಗಡಿಗೆ ಹೊಂದಿಕೊಂಡಿರುವ ಹುಯಿಟ್ಜಿಲಾಕ್‌ನಲ್ಲಿ ಶನಿವಾರ ತಡರಾತ್ರಿ ದಾಳಿ ನಡೆದಿದೆ ಎಂದು ಮೊರೆಲೋಸ್ ರಾಜ್ಯ ಸರ್ಕಾರ ಹೇಳಿದೆ.
'ದಟ್ಟ ಅರಣ್ಯವನ್ನು ಹೊಂದಿರುವ ಈ ಪ್ರದೇಶ ಮರಗಳ್ಳರು, ಅಪಹರಣಕಾರರು ಹಾಗೂ ಡ್ರಗ್ ಗ್ಯಾಂಗ್‌ಗಳಿಗೆ ಅಡಗುತಾಣವಾಗಿದೆ. ಘಟನೆಯಲ್ಲಿ ಮುಗ್ದ ಜನರು ಮೃತಪಟ್ಟಿದ್ದಾರೆ. ಇದು ಭಯಾನಕ ಹಿಂಸಾತ್ಮಕ ಕೃತ್ಯ' ಎಂದು ಪಟ್ಟಣದ ಮೇಯರ್, ರಾಫೆಲ್ ವರ್ಗಾಸ್ ಹೇಳಿದ್ದಾರೆ. ಹಿಂಸಾಚಾರ ನಿಲ್ಲಬೇಕು. ನಮ್ಮ ಜನರ ರಕ್ಷಣೆಗೆ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.