ADVERTISEMENT

ಪಾಕ್‌ ಸೇನಾ ಮುಖ್ಯಸ್ಥನ ವಿರುದ್ಧ ಟ್ವೀಟ್‌: ಇಮ್ರಾನ್‌ ಪಕ್ಷದ 8 ಕಾರ್ಯಕರ್ತರ ಬಂಧನ

ಪಿಟಿಐ
Published 13 ಏಪ್ರಿಲ್ 2022, 4:01 IST
Last Updated 13 ಏಪ್ರಿಲ್ 2022, 4:01 IST
ಇಮ್ರಾನ್‌ ಖಾನ್‌
ಇಮ್ರಾನ್‌ ಖಾನ್‌   

ಲಾಹೋರ್‌: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರ 'ಪಾಕಿಸ್ತಾನ್‌ ತೆಹ್ರೀಕ್ ಎ ಇನ್ಸಾಫ್‌ ' (ಪಿಟಿಐ) ಪಕ್ಷದ 8 ಮಂದಿ ಸಾಮಾಜಿಕ ಮಾಧ್ಯಮ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಅವರ ವಿರುದ್ಧ ಪಾಕ್‌ ಸೇನಾ ಮುಖ್ಯಸ್ಥ ಜ. ಖಮರ್‌ ಜಾವೇದ್‌ ಬಾಜ್ವಾ ಹಾಗೂ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ವಿರುದ್ಧ ನಿಂದನೆ ಹಾಗೂ ಅಪಪ್ರಚಾರ ನಡೆಸಿದ ಆರೋಪ ಹೊರಿಸಲಾಗಿದೆ.

ಪಂಜಾಬ್‌ನ ವಿವಿಧ ಪ್ರದೇಶಗಳಲ್ಲಿದ್ದ 8 ಮಂದಿ ಪಿಟಿಐ ಕಾರ್ಯಕರ್ತರನ್ನು ಪಾಕಿಸ್ತಾನದ ಫೆಡರಲ್‌ ಇನ್ವೆಸ್ಟಿಗೇಷನ್‌ ಏಜೆನ್ಸಿ (ಎಫ್ಐಎ) ಮಂಗಳವಾರ ಬಂಧಿಸಿದೆ.

ಮಾರ್ಚ್‌ 8ರಂದು ಇಮ್ರಾನ್‌ ಖಾನ್‌ ತಮ್ಮ ಸರ್ಕಾರ ವಿರುದ್ಧದ 'ಅವಿಶ್ವಾಸ ನಿರ್ಣಯ'ದಲ್ಲಿ ಪರಾಭವಗೊಂಡು, ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಳ್ಳುತ್ತಿದ್ದಂತೆ ಟ್ವಿಟರ್‌ನಲ್ಲಿ ಜ. ಬಾಜ್ವಾ ವಿರುದ್ಧದ ಆಪಾದನೆಗಳನ್ನು ಒಳಗೊಂಡ ಅಭಿಯಾನ ಟ್ರೆಂಡಿಂಗ್‌ನಲ್ಲಿತ್ತು.

ADVERTISEMENT

'ಸೇನಾ ಮುಖ್ಯಸ್ಥ ಮತ್ತು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ವಿರುದ್ಧದ ಸಾವಿರಾರು ಟ್ವೀಟ್‌ಗಳ ಮೂಲಕ ಅಪಪ್ರಚಾರದಲ್ಲಿ ಭಾಗಿಯಾಗಿದ್ದ 50 ಮಂದಿ ಶಂಕಿತರ ಪಟ್ಟಿಯನ್ನು ಗುಪ್ತಚರ ಸಂಸ್ಥೆಗಳು ನೀಡಿದ್ದವು. ಈ ಪೈಕಿ 8 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ' ಎಂದು ಎಫ್‌ಐಎ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.