ADVERTISEMENT

ಅಮ್ಮ-ಅಪ್ಪ ಬೇಕೆಂದ ಬಾಲಕ: ದತ್ತು ಪಡೆಯಲು ಮುಂದೆ ಬಂದವು ಸಾವಿರಾರು ಕುಟುಂಬಗಳು

ಏಜೆನ್ಸೀಸ್
Published 19 ಆಗಸ್ಟ್ 2020, 4:31 IST
Last Updated 19 ಆಗಸ್ಟ್ 2020, 4:31 IST
ಜೋರ್ಡಾನ್‌
ಜೋರ್ಡಾನ್‌   

ವಾಷಿಂಗ್ಟಂನ್: ಸದ್ಯ ಅನಾಥಾಶ್ರಮದ ಆರೈಕೆಯಲ್ಲಿರುವ ಒಂಬತ್ತು ವರ್ಷದ ಒಕ್ಲಹೋಮದ ಹುಡುಗನೊಬ್ಬ ಸುದ್ದಿ ವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.ಆತನನ್ನು ದತ್ತು ಪಡೆಯಲು ಸಾವಿರಾರು ಜನರು ಅರ್ಜಿಗಳನ್ನು ಸಲ್ಲಿಸಿದ್ದಾರೆ.

ಎಬಿಸಿ ನ್ಯೂಸ್ ಪ್ರಕಾರ, ಬಾಲಕನು ಕುಟುಂಬದ ಭಾಗವಾಗಬೇಕೆಂದು ಅವಲತ್ತುಕೊಂಡ ನಂತರ ದತ್ತು ನೀಡುವ ಅಧಿಕಾರಿಗಳು ಈಗ 5000ಕ್ಕೂ ಹೆಚ್ಚಿ ದತ್ತು ಪಡೆಯುವ ಅರ್ಜಿಗಳ ಪರಿಶೀಲನೆಯನ್ನು ನಡೆಸುತ್ತಿದ್ದಾರೆ.

ಕಳೆದ ಜುಲೈನಲ್ಲಿ ಸ್ಥಳೀಯ ಸುದ್ದಿ ವಾಹಿನಿ ಕೆಎಫ್‌ಒಆರ್ ಬಾಲಕ ಜೋರ್ಡಾನ್‌ನನ್ನು ಸಂದರ್ಶನ ನಡೆಸಿತ್ತು. ತಾನು ಕುಟುಂಬವೊಂದರ ಭಾಗವಾಗಬೇಕು ಎಂದು ಆತ ತನ್ನ ಕನಸನ್ನು ಹಂಚಿಕೊಂಡಿದ್ದ.

ADVERTISEMENT

ಕಳೆದ ವರ್ಷ ತನ್ನ ಸಹೋದರನನ್ನು ಹೇಗೆ ದತ್ತು ಪಡೆದರು ಮತ್ತು ಆತ ಕುಟುಂಬವೊಂದರ ಭಾಗವಾಗಬೇಕೆಂದು ಹೇಗೆ ಬಯಸಿದ್ದ ಎನ್ನುವ ಕುರಿತು ಹೇಳಿಕೊಂಡಿದ್ದ. ನನಗೆ ಅಪ್ಪ-ಅಮ್ಮ ಅಂತ ಕರೆಯಬೇಕೆಂಬ ಆಸೆಯಿದೆ.ಕುಟುಂಬವೊಂದರ ಭಾಗವಾಗಿ ಬದುಕುವ ಆಸೆಯಿದೆ ಎಂದು ಅವನು ಭಾವುಕನಾಗಿ ಹೇಳಿಕೊಂಡಿದ್ದ.

ಬಾಲಕನ ಮನದಮಾತಿಗೆ ಓಗೊಟ್ಟಿರುವನ್ಯೂಜೆರ್ಸಿ, ಫ್ಲೋರಿಡಾ, ಇಲಿನಾಯಿಸ್ ಮತ್ತು ಕೆಂಟುಕಿ ನಗರಗಳಸಾವಿರಾರು ಕುಟುಂಬಗಳು ಸುದ್ದಿವಾಹಿನಿಯನ್ನು ಸಂಪರ್ಕಿಸಿಜೋರ್ಡಾನ್ ಅನ್ನು ದತ್ತು ತೆಗೆದುಕೊಳ್ಳುವ ಇಚ್ಛೆಯನ್ನು ವ್ಯಕ್ತಪಡಿಸಿದ್ದವುಎಂದು ಡೈಲಿ ಮೇಲ್ ವರದಿ ಮಾಡಿದೆ.

ಜೋರ್ಡಾನ್ ಅನ್ನು ಕೆಎಫ್‌ಒಆರ್‌ನ ವಾರದ ಸಂದರ್ಶನದ ಸರಣಿಯ ಭಾಗವಾಗಿ ‘ಎ ಪ್ಲೇಸ್ ಟು ಕಾಲ್ ಹೋಮ್’ ಎನ್ನುವ ಶೀರ್ಷಿಕೆಯಡಿ ಸಂದರ್ಶನ ನಡೆಸಲಾಗಿತ್ತು. ಒಕ್ಲಹೋಮಾದ ಮಾನವ ಸೇವೆಗಳ ಇಲಾಖೆಯು ಜೋರ್ಡಾನ್‌ಗೆ ಅಗತ್ಯವಿರುವ ಕುಟುಂಬವನ್ನು ಆಯ್ಕೆ ಮಾಡಲು ಅರ್ಜಿಗಳ ಪರಿಶೀಲನೆಯಲ್ಲಿ ತೊಡಗಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.