ಬರ್ಲಿನ್: ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ ನಡೆದ 10,505 ಕೊಲೆಗಳಿಗೆ ಪ್ರೇರಕಳಾಗಿದ್ದಾಳೆ ಎಂಬ ಅಪರಾಧ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ 99 ವರ್ಷದ ಮಹಿಳೆ ಸಲ್ಲಿಸಿದ್ದ ಮೇಲ್ಮನವಿಯನ್ನು ಜರ್ಮನ್ ಕೋರ್ಟ್ ಮಂಗಳವಾರ ತಿರಸ್ಕರಿಸಿದೆ.
ನಾಜಿ ಶಿಬಿರದ ಕಮಾಂಡರ್‌ನ ಕಾರ್ಯದರ್ಶಿಯಾಗಿದ್ದ ಇರ್ಮ್‌ಗರ್ಡ್ ಫರ್ಚ್‌ನರ್ ಈ ಎಲ್ಲ ಕೊಲೆಗಳಿಗೆ ಪ್ರೇರಕಳಾಗಿದ್ದಳು ಎಂಬ ಪ್ರಕರಣದಲ್ಲಿ ಸ್ಥಳೀಯ ಕೋರ್ಟ್ ಡಿಸೆಂಬರ್ 2022ರಲ್ಲಿ ಶಿಕ್ಷೆ ವಿಧಿಸಿತ್ತು. ಈ ತೀರ್ಪನ್ನು ಫೆಡರಲ್ ಕೋರ್ಟ್ ಎತ್ತಿಹಿಡಿದಿದೆ.
ಜರ್ಮನಿಯ ಪ್ರಮುಖ ಯಹೂದಿ ನಾಯಕ ಜೋಸೆಫ್ ಶ್ಯೂಸ್ಟರ್ ಕೋರ್ಟ್ ತೀರ್ಪನ್ನು ಸ್ವಾಗತಿಸಿದ್ದಾರೆ. ‘ಸಾಮೂಹಿಕ ಹತ್ಯೆ ನಡೆದ 80 ವರ್ಷಗಳ ನಂತರವೂ ನಾಜಿಯ ಕೃತ್ಯವನ್ನು ಅಲ್ಲಗಳೆಯದೆ ನ್ಯಾಯಾಂಗ ವ್ಯವಸ್ಥೆಯು ಮಹತ್ವದ ಸಂದೇಶ ಸಾರಿದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.