ಪ್ಯಾರಿಸ್: ಆಗಂತುಕನೊಬ್ಬ, ಇಲ್ಲಿನ ಹೆಗ್ಗುರುತಾದ ಐಫೆಲ್ ಟವರ್ ಏರುತ್ತಿರುವುದು ಕಂಡುಬಂದ ಕಾರಣ ಪೊಲೀಸರು ಈ ಸ್ಮಾರಕದ ಸುತ್ತಮುತ್ತಲಿನ ಜನರನ್ನು ತೆರವುಗೊಳಿಸಿದ್ದಾರೆ. ಭಾನುವಾರ ಸಂಜೆ ಉದ್ಘಾಟನಾ ಸಮಾರಂಭಕ್ಕೆ ಕೆಲವು ಗಂಟೆಗಳಿರುವಂತೆ ಶರ್ಟು ಹಾಕಿಲ್ಲದೇ ಇರುವ ವ್ಯಕ್ತಿ ಕಾಣಿಸಿಕೊಂಡಿದ್ದಾನೆ.
330 ಮೀ. ಎತ್ತರದ ಈ ಗೋಪುರವನ್ನು ವ್ಯಕ್ತಿ ಹತ್ತುತ್ತಿರುವುದು ಮಧ್ಯಾಹ್ನ ಗೋಚರವಾಗಿದೆ. ಈ ಸ್ಮಾರಕದ ಎರಡನೇ ಹಂತದಲ್ಲಿ (ಸೆಕ್ಷನ್‌ನಲ್ಲಿ) ಒಲಿಂಪಿಕ್ ಬಳೆಗಳನ್ನು ಜೋಡಿಸಲಾಗಿದ್ದು, ಅದಕ್ಕಿಂತ ಸ್ವಲ್ಪ ಮೇಲೆ ಕಾಣಿಸಿದ್ದಾನೆ.
ಮಧ್ಯಾಹ್ನ 3 ಗಂಟೆ ಸುಮಾರಿಗೆ ವ್ಯಕ್ತಿ ಕಾಣಿಸಿಕೊಂಡಾಗ ಪೊಲೀಸರು ಜನರನ್ನು ಅಲ್ಲಿಂದ ಖಾಲಿ ಮಾಡಿಸಿದ್ದಾರೆ. ಗೊಂದಲ ತಪ್ಪಿಸಲು 30 ನಿಮಿಷ ನಂತರ ಟವರ್‌ನ ಎರಡನೇ ಫ್ಲೋರ್‌ನಲ್ಲಿದ್ದ ಜನರಿಗೆ ಕೆಳಗಿಳಿಯಲು ಅವಕಾಶ ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.