ADVERTISEMENT

ಹಿಜ್ಬುಲ್ಲಾ ನಾಯಕ ನಸ್ರಲ್ಲಾ ಸಾವಿನ ಸುದ್ದಿ ಹೇಳುವಾಗ ಕಣ್ಣೀರಿಟ್ಟ ಟಿವಿ ನಿರೂಪಕಿ

ಲೆಬನಾನ್‌ನ ಸುದ್ದಿ ಟಿ.ವಿಯ ನಿರೂಪಕಿಯೊಬ್ಬರು ನಸ್ರಲ್ಲಾ ಹತ್ಯೆ ಖಚಿತವಾದ ಬಳಿಕ ಆ ಸುದ್ದಿಯನ್ನು ಹೇಳುವಾಗ ಹೆಚ್ಚು ಭಾವನಾತ್ಮಕವಾಗಿ ಕಣ್ಣೀರು ಹಾಕಿದ್ದಾರೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಸೆಪ್ಟೆಂಬರ್ 2024, 11:15 IST
Last Updated 29 ಸೆಪ್ಟೆಂಬರ್ 2024, 11:15 IST
<div class="paragraphs"><p>ಟಿವಿ ನಿರೂಪಕಿ</p></div>

ಟಿವಿ ನಿರೂಪಕಿ

   

ಬೆಂಗಳೂರು: ಕಳೆದ ಶುಕ್ರವಾರ ಇರಾನ್ ಬೆಂಬಲಿತ ಲೆಬನಾನ್‌ನ ಹಿಜ್ಬುಲ್ಲಾ ಸಂಘಟನೆಯ‌ ಮುಖ್ಯಸ್ಥ ಸಯ್ಯದ್‌ ಹಸನ್‌ ನಸ್ರಲ್ಲಾ (64) ಅವರನ್ನು ಇಸ್ರೇಲ್‌ ಸೇನೆ ಹತ್ಯೆ ಮಾಡಿತ್ತು. ಈ ಘಟನೆ ಇಸ್ರೇಲ್‌ನಲ್ಲಿ ಭಾರಿ ಸಂಭ್ರಮಕ್ಕೆ ಎಡೆ ಮಾಡಿ ಕೊಟ್ಟರೇ ಲೆಬನಾನ್‌ನಲ್ಲಿ ಹಿಜ್ಬುಲ್ಲಾ ಬೆಂಬಲಿಸುವ ಜನರ ಭಾರಿ ದುಃಖಕ್ಕೆ ಕಾರಣವಾಗಿದೆ.

ಇದಕ್ಕೆ ಉದಾಹರಣೆ ಎನ್ನುವಂತೆ ಲೆಬನಾನ್‌ನ ಸುದ್ದಿ ಟಿ.ವಿಯ ನಿರೂಪಕಿಯೊಬ್ಬರು ನಸ್ರಲ್ಲಾ ಹತ್ಯೆ ಖಚಿತವಾದ ಬಳಿಕ ಆ ಸುದ್ದಿಯನ್ನು ಹೇಳುವಾಗ ಹೆಚ್ಚು ಭಾವನಾತ್ಮಕವಾಗಿ ಕಣ್ಣೀರು ಹಾಕಿದ್ದಾರೆ.

ADVERTISEMENT

ಅಲ್ ಮಯಾದೀನ್ ಚಾನೆಲ್‌ನ ನಿರೂಪಕಿ ನಸ್ರಲ್ಲಾ ಇನ್ನಿಲ್ಲ ಎಂದು ಹೇಳಿ ಭಾವುಕರಾಗಿದ್ದಾರೆ. ಈ ವಿಡಿಯೊ ಸಾಮಾಜಿಕ ತಾಣಗಳಲ್ಲಿ ಹರಿದಾಡಿದೆ.

ನಸ್ರಲ್ಲಾ ಸಾವಿಗೆ ಇಸ್ರೇಲ್‌ನಲ್ಲಿ ಸಂಭ್ರಮಾಚರಣೆಗಳು ನಡೆದಿವೆ. ಅಲ್ಲದೇ ಇರಾನ್‌, ಲೆಬನಾನ್‌ನಲ್ಲೂ ಹಿಜ್ಬುಲ್ಲಾ ವಿರೋಧಿಗಳಿಂದ ಸಂಭ್ರಮ ನಡೆದಿವೆ.

ಇನ್ನೊಂದೆಡೆ ಶನಿವಾರ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಹಿಜ್ಬುಲ್ಲಾ ಸಂಘಟನೆಯ ಮತ್ತೊಬ್ಬ ಮುಖಂಡ ಮೃತಪಟ್ಟಿದ್ದಾನೆ ಎಂದು ಇಸ್ರೇಲ್ ಸೇನಾಧಿಕಾರಿಗಳು ಹೇಳಿದ್ದಾರೆ.

ದಾಳಿಯಲ್ಲಿ ಹಿಜ್ಬುಲ್ಲಾ ಕೇಂದ್ರ ಸಮಿತಿಯ ಉಪ ಮುಖ್ಯಸ್ಥ ನಬಿಲ್ ಕಾವುಕ್ ಎನ್ನುವರು ಮೃತಪಟ್ಟಿದ್ದಾರೆ. ಶುಕ್ರವಾರವಷ್ಟೇ ಹಿಜ್ಬುಲ್ಲಾದ ಮುಖ್ಯಸ್ಥ ಸಯ್ಯದ್‌ ಹಸನ್‌ ನಸ್ರಲ್ಲಾರನ್ನು ಇಸ್ರೇಲ್ ವಾಯುದಾಳಿ ಮಾಡಿ ಹತ್ಯೆ ಮಾಡಿತ್ತು.

‘ನಸ್ರಲ್ಲಾ ಅವರ ಹತ್ಯೆಯ ಬಳಿಕ ಯುದ್ಧ ನಿಲ್ಲಲಿದೆ ಎಂದು ತಿಳಿಯಬೇಕಿಲ್ಲ’ ಎಂದು ಇಸ್ರೇಲ್‌ ಹೇಳಿದೆ. ಹಿಜ್ಬುಲ್ಲಾ ಸಂಘಟನೆ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ‘ನಮ್ಮ ಶತ್ರುವಿನ ವಿರುದ್ಧ ಹಾಗೂ ಪ್ಯಾಲೆಸ್ಟೀನ್‌ ಪರವಾದ ನಮ್ಮ ಈ ಪವಿತ್ರ ಯುದ್ಧವು ಮುಂದುವರಿಯಲಿದೆ’ ಎಂದಿದೆ.

ನಸ್ರಲ್ಲಾ ಅವರ ಹತ್ಯೆಯನ್ನು ಇಸ್ರೇಲಿಗರು ಸಂಭ್ರಮಿಸುತ್ತಿದ್ದಾರೆ. ಹಾಗೆಯೇ ಯುದ್ಧ ಮತ್ತೆ ವ್ಯಾಪಕತೆಯನ್ನು ತೆಗೆದುಕೊಂಡಿರುವುದಕ್ಕೆ ಆತಂಕವನ್ನೂ ವ್ಯಕ್ತಪಡಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.