ADVERTISEMENT

ಮೌಂಟ್‌ ಎವರೆಸ್ಟ್‌ನಲ್ಲಿ ಕಸದ ರಾಶಿ: ಕಾಮಿ ರೀಟಾ ಕಳವಳ

ಏಜೆನ್ಸೀಸ್
Published 29 ಮೇ 2024, 14:06 IST
Last Updated 29 ಮೇ 2024, 14:06 IST
ಕಾಮಿ ರೀಟಾ 
ಕಾಮಿ ರೀಟಾ    

ಕಠ್ಮಂಡು: ವಿಶ್ವದ ಅತಿ ಎತ್ತರದ ಶಿಖರ ಮೌಂಟ್‌ ಎವರೆಸ್ಟ್‌ನಲ್ಲಿ ಕಸದ ರಾಶಿ ಹೆಚ್ಚಾಗುತ್ತಿದೆ ಎಂದು ಪ್ರಸಿದ್ಧ ಶೆರ್ಪಾ ಮಾರ್ಗದರ್ಶಿ ಕಾಮಿ ರೀಟಾ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. 

1953ರಲ್ಲಿ ನ್ಯೂಜಿಲೆಂಡ್‌ನ ಎಡ್ಮಂಡ್‌ ಹಿಲರಿ ಮತ್ತು ನೇಪಾಳಿ ಶೆರ್ಪಾ ತೇನ್‌ಜಿಂಗ್‌ ನಾರ್ಗೆ ಅವರು ಮೊದಲ ಬಾರಿ ಮೌಂಟ್‌ ಎವರೆಸ್ಟ್ ಅನ್ನು ಯಶಸ್ವಿಯಾಗಿ ಆರೋಹಣ ಮಾಡಿದ ನೆನಪಿಗಾಗಿ ನೇಪಾಳ ಸರ್ಕಾರ ಬುಧವಾರ ‘ಮೌಂಟ್ ಎವರೆಸ್ಟ್‌ ದಿನ’ವನ್ನು ಆಚರಿಸಿತು. ಈ ವೇಳೆ 30 ಬಾರಿ ಮೌಂಟ್‌ ಎವರೆಸ್ಟ್‌ ಆರೋಹಣ ಮಾಡಿ ದಾಖಲೆ ಬರೆದಿರುವ ಶೆರ್ಪಾ ಕಾಮಿ ರೀಟಾ ಅವರಿಗೆ ನೇಪಾಳ ಪ್ರಧಾನಿ ಪುಷ್ಪ ಕಮಲ್‌ ದಹಲ್‌ ಅವರು ಗೌರವ ಅಭಿನಂದನೆ ಸಲ್ಲಿಸಿದ್ದಾರೆ. 

ನಂತರ ಕಾಮಿ ರೀಟಾ ಅವರು, ‘ಮೌಂಟ್‌ ಎವರೆಸ್ಟ್‌ನಲ್ಲಿ ಕಸದ ರಾಶಿ ಬೆಳೆಯುತ್ತಿದೆ. ಶಿಖರದಿಂದ ಮಂಜು ಕರಗುತ್ತಿದ್ದಂತೆ ಕಸವೂ ಹೆಚ್ಚಾಗುತ್ತಿದ್ದು, ಇದರಿಂದ ನಾನು ತೀವ್ರ ಚಿಂತಿತನಾಗಿದ್ದೇನೆ. ಈ ಬಗ್ಗೆ ಶೀಘ್ರವೇ ಗಮನ ಹರಿಸಬೇಕಾಗಿದೆ. ಶಿಬಿರಗಳಲ್ಲಿ ಕಸವನ್ನು ಸ್ವಚ್ಛಗೊಳಿಸಲು ಸರ್ಕಾರವು ಧನಸಹಾಯ ಅಭಿಯಾನಗಳ ಮೂಲಕ ಎವರೆಸ್ಟ್‌ ದಿನವನ್ನು ಆಚರಿಸಬೇಕು’ ಎಂದು ಸಲಹೆ ನೀಡಿದ್ದಾರೆ. 

ADVERTISEMENT

ಇದೇ ವೇಳೆ ಶೆರ್ಪಾಗಳ ವಿಮೆಯ ಮೊತ್ತವನ್ನೂ ಹೆಚ್ಚಿಸಬೇಕು ಎಂದು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.