ADVERTISEMENT

ಸ್ವೀಡನ್‌ ಸೆಕ್ಸ್ ಚಾಂಪಿಯನ್‌ಶಿಪ್: ಸಿಕ್ತಾ ಅನುಮತಿ? ಕ್ರೀಡಾ ಒಕ್ಕೂಟ ಹೇಳಿದ್ದೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಜೂನ್ 2023, 13:13 IST
Last Updated 7 ಜೂನ್ 2023, 13:13 IST
ಕಾಂಡೋಮ್‌ ( ಸಾಂದರ್ಭಿಕ ಚಿತ್ರ)
ಕಾಂಡೋಮ್‌ ( ಸಾಂದರ್ಭಿಕ ಚಿತ್ರ)   

ಸ್ಟಾಕ್‌ಹೋಮ್‌: ಸ್ವೀಡನ್‌ ದೇಶದಲ್ಲಿ ಸೆಕ್ಸ್ ಚಾಂಪಿಯನ್‌ಶಿಪ್ ನಡೆಯಲಿದೆ ಎಂದು ಭಾರತ ಸೇರಿದಂತೆ ಜಗತ್ತಿನ ಪ್ರಮುಖ ವೆಬ್‌ಸೈಟ್‌ಗಳು ವರದಿಯಾಗಿತ್ತು.

ಭಾರತ ಮಾತ್ರವಲ್ಲದೆ, ಯುರೋಪ್‌, ಅಮೆರಿಕ, ಏಷ್ಯಾ, ಆಫ್ರಿಕಾ ಸೇರಿದಂತೆ ಜಗತ್ತಿನ ಕೆಲವು ಪ್ರಮುಖ ವೆಬ್‌ಸೈಟ್‌ಗಳು ಕೂಡ ಈ ಬಗ್ಗೆ ವರದಿ ಮಾಡಿದ್ದವು.

ಸ್ವೀಡನ್‌ ಸರ್ಕಾರ ಅಧಿಕೃತವಾಗಿ ಲೈಂಗಿಕತೆಯನ್ನು ಕ್ರೀಡೆಯಾಗಿ ಗುರುತಿಸಿದೆ. ಈ ನಿಮಿತ್ತ  ಜೂನ್‌ 8ರಂದು ಗೋಥನ್‌ಬರ್ಗ್ ನಗರದಲ್ಲಿ ಮೊದಲ ಬಾರಿಗೆ ಸೆಕ್ಸ್ ಚಾಂಪಿಯನ್‌ಶಿಪ್ ಆಯೋಜಿಸುತ್ತಿದೆ. ಇದಕ್ಕೆ ಸ್ವೀಡನ್‌ ಕ್ರೀಡಾ ಇಲಾಖೆ ಮಾನ್ಯತೆ ನೀಡಿದೆ ಎಂದು ವರದಿಯಾಗಿತ್ತು. 

ADVERTISEMENT

ಸೆಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವ ಸ್ಪರ್ಧಿಗಳು ಸುಮಾರು ಆರು ಗಂಟೆಗಳವರೆಗೆ ಸೆಕ್ಸ್‌ನಲ್ಲಿ ತೊಡಗಿಸಿಕೊಳ್ಳುವ ಪಂದ್ಯಗಳನ್ನು ಆಯೋಜನೆ ಮಾಡಲಾಗುವುದು. 20 ಸ್ಪರ್ಧಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ವರದಿಯಾಗಿತ್ತು

ಈ ಚಾಂಪಿಯನ್​ಶಿಪ್​​ನಲ್ಲಿ ಒಂದು ದಿನಕ್ಕೆ 6 ಗಂಟೆಗಳ ಕಾಲ ಸೆಕ್ಸ್‌ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು. ಈ ಅವಧಿಯಲ್ಲಿ ಸ್ಪರ್ಧಾಳುಗಳು ಲೈಂಗಿಕ ಚಟುವಟಿಕೆಯಲ್ಲಿ ತೊಡಗಲು 45 ನಿಮಿಷಗಳಿಂದ ಒಂದು ಗಂಟೆಯವರೆಗೆ ಕಾಲಾವಕಾಶ ಇರಲಿದೆ ಎಂದು ವರದಿಯಾಗಿತ್ತು.

ಈ ಎಲ್ಲಾ ಮಾಹಿತಿಯನ್ನು ಕ್ರೀಡಾ ಒಕ್ಕೂಟ ತಳ್ಳಿಹಾಕಿದೆ. ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ‘ಸೆಕ್ಸ್ ಚಾಂಪಿಯನ್‌ಶಿಪ್‘ ಸುದ್ದಿ ಸುಳ್ಳು ಸುದ್ದಿಯಾಗಿದೆ. ಅಂತಹ ಯಾವುದೇ ಕ್ರೀಡೆಯನ್ನು ಆಯೋಜಿಸುತ್ತಿಲ್ಲ, ಹಾಗೇ ಲೈಂಗಿಕತೆಗೆ ಕ್ರೀಡಾ ಮಾನ್ಯತೆ ನೀಡಿಲ್ಲ ಎಂದು ಸ್ವೀಡನ್‌ ಕ್ರೀಡಾ ಒಕ್ಕೂಟದ ವಕ್ತಾರ ಜಾರ್ನ್‌ ಎರಿಕ್ಸನ್‌ ಹೇಳಿದ್ದಾರೆ.

ಸ್ವೀಡನ್‌ ಭಾಷೆಯ ಪ್ರಮುಖ ಪತ್ರಿಕೆಗಳಲ್ಲಿ ಒಂದಾದ ಗೊಟೆಬೋರ್ಗ್ಸ್‌-ಪೋಸ್ಟೆನ್ ಮಾಧ್ಯಮದ ಡ್ರಾಗನ್ ಬ್ರಾಟಿಕ್ ಎಂಬುವರು ಈ ಸುದ್ದಿಯನ್ನು ಹರಡಿದ್ದಾರೆ ಎಂದು ಹೇಳಲಾಗಿದೆ. ಬ್ರಾಟಿಕ್ ಹಲವು ಕ್ಲಬ್‌ಗಳನ್ನು ಹೊಂದಿದ್ದಾರೆ. ಲೈಂಗಿಕತೆಯನ್ನು ಕ್ರೀಡೆಯನ್ನಾಗಿ ವರ್ಗೀಕರಿಸಬೇಕು ಎಂದು ಅರ್ಜಿ ಸಲ್ಲಿಸಿದ್ದರು. ಆದರೆ ಈ ಅರ್ಜಿಯನ್ನು ಕ್ರಿಡಾ ಒಕ್ಕೂಟ ತಿರಸ್ಕರಿಸಿತ್ತು.

ಈ ಬಗ್ಗೆ ಸ್ವೀಡನ್‌ ಸರ್ಕಾರ ಯಾವುದೇ ಪ್ರತಿಕ್ರಿಯೆ ಅಥವಾ ಹೇಳಿಕೆ ನೀಡಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.