ಜಿನೇವಾ: ತಾಯಂದಿರ ಮರಣ ಪ್ರಮಾಣ ಗಣನೀಯವಾಗಿ ಇಳಿಕೆ ಕಂಡರೂ ಕೂಡ, ವಿಶ್ವದಾದ್ಯಂತ ಪ್ರತೀ ಎರಡು ನಿಮಿಷಕ್ಕೆ ಒಬ್ಬ ಗರ್ಭಿಣಿ ಅಥವಾ ಮಗುವಿಗೆ ಜನ್ಮ ಕೊಡುವ ವೇಳೆ ತಾಯಿಯೊಬ್ಬರುಯ ಮೃತಪಡುತ್ತಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ.
2000–2015ನೇ ಅವಧಿಯಲ್ಲಿ ತಾಯಿ ಮರಣ ಪ್ರಮಾಣ ಭಾರೀ ಸಂಖ್ಯೆಯಲ್ಲಿ ಇಳಿಕೆಯಾಗಿತ್ತು. 2016–2020ರ ಅವಧಿಯಲ್ಲಿ ಇದು ಯಥಾಸ್ಥಿತಿಯಲ್ಲಿತ್ತು ಎಂದು ವಿಶ್ವಸಂಸ್ಥೆ ಹೇಳಿದೆ.
ಕಳೆದ 20 ವರ್ಷಗಳಲ್ಲಿ ತಾಯಂದಿರ ಮರಣ ಪ್ರಮಾಣ ಶೇ 34.3 ರಷ್ಟು ಇಳಿಕೆಯಾಗಿದೆ. 2000ನೇ ಇಸವಿಯಲ್ಲಿ ಮಕ್ಕಳಿಗೆ ಜನ್ಮ ನೀಡುವ 1,00,000 ತಾಯಂದಿರ ಪೈಕಿ 339 ತಾಯಂದಿರು ಮೃತಪಡುತ್ತಿದ್ದರು. 2020ಕ್ಕೆ ಇದು 223ಕ್ಕೆ ಇಳಿಕೆಯಾಗಿದೆ.
ಇದರ ಜತೆಗೆ 2020ರಲ್ಲಿ ದಿನವೊಂದಕ್ಕೆ 800 ಮಂದಿ ಮಹಿಳೆಯರು ಮೃತಪಟ್ಟಿದ್ದಾರೆ. ಅಂದರೆ ಪ್ರತೀ ಎರಡು ನಿಮಿಷಕ್ಕೊಬ್ಬರು ಮಹಿಳೆ ಕೊನೆಯುಸಿರೆಳೆಯುತ್ತಿದ್ದಾರೆ.
ಬೆಲಾರಸ್‌ನಲ್ಲಿ ತಾಯಂದಿರ ಮರ ಪ್ರಮಾಣ ಭಾರೀ ಇಳಿಕೆಯಾಗಿದ್ದು, ಶೇ 95.5 ರಷ್ಟು ಇಳಿಕೆ ಕಂಡಿದೆ. ವೆನಿಜುವೆಲಾದಲ್ಲಿ ಈ ಪ್ರಮಾಣ ಭಾರಿ ಏರಿಕೆಯಾಗಿದೆ. 2000–2015ರ ಅವಧಿಯಲ್ಲಿ ಅಮೆರಿಕದಲ್ಲಿ ತಾಯಂದಿರ ಮರಣ ಪ್ರಮಾಣ ಭಾರೀ ಏರಿಕೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.