ADVERTISEMENT

ಬಿಲ್‌ ಬಾಕಿ: ಬಾಂಗ್ಲಾಗೆ ಶೇ 50ರಷ್ಟು ವಿದ್ಯುತ್‌ ಕಡಿತಗೊಳಿಸಿದ ಅದಾನಿ ಕಂಪನಿ

ಪಿಟಿಐ
Published 1 ನವೆಂಬರ್ 2024, 15:36 IST
Last Updated 1 ನವೆಂಬರ್ 2024, 15:36 IST
   

ಢಾಕಾ: ಬಾಂಗ್ಲಾದೇಶವು ಬಾಕಿ ಬಿಲ್‌ ಪಾವತಿಸದ ಕಾರಣ ಭಾರತದ ಅದಾನಿ ಪವರ್‌ನ ಅಂಗಸಂಸ್ಥೆ ’ಅದಾನಿ ಪವರ್‌ ಜಾರ್ಖಂಡ್‌ ಲಿಮಿಟೆಡ್‌’ (ಎಪಿಜೆಎಲ್‌) ನೆರೆ ರಾಷ್ಟ್ರಕ್ಕೆ ವಿದ್ಯುತ್‌ ಪೂರೈಕೆಯಲ್ಲಿ ಅರ್ಧದಷ್ಟು ಕಡಿತಗೊಳಿಸಿದೆ.

ಬಾಂಗ್ಲಾದೇಶವು 84.6 ಕೋಟಿ ಡಾಲರ್‌ ಮೊತ್ತವನ್ನು ಬಾಕಿ ಉಳಿಸಿಕೊಂಡಿದೆ. ಪವರ್‌ ಗ್ರಿಡ್‌ ಬಾಂಗ್ಲಾದೇಶ ಪಿಎಲ್‌ಸಿಯ ಅಂಕಿಅಂಶದ ಪ್ರಕಾರ ಗುರುವಾರ ರಾತ್ರಿ ವಿದ್ಯುತ್‌  ಪೂರೈಕೆ ಇಳಿಕೆಯಾಗಿದೆ ಎಂದು ವರದಿಯಾಗಿದೆ.

ಗುರುವಾರ ಮತ್ತು ಶುಕ್ರವಾರ ನಡುವಿನ ಮಧ್ಯ ರಾತ್ರಿಯಲ್ಲಿ 1,600 ಮೆಗಾವ್ಯಾಟ್‌ ಕೊರತೆಯಾಗಿದೆ.

ADVERTISEMENT

ಈ ಮುನ್ನ ಅದಾನಿ ಕಂಪನಿಯು ಅಕ್ಟೋಬರ್‌ 30ರೊಳಗೆ ಬಾಂಗ್ಲಾದೇಶ ವಿದ್ಯುತ್ ಅಭಿವೃದ್ಧಿ ಮಂಡಳಿಯು (ಪಿಡಿಬಿ) ಬಾಕಿ ಹಣ ಪಾವತಿಸಬೇಕು ಎಂದು ವಿದ್ಯುತ್‌ ಇಲಾಖೆಯ ಕಾರ್ಯದರ್ಶಿಗೆ ಪತ್ರ ಬರೆದಿತ್ತು. ಅಕ್ಟೋಬರ್‌ 27ರ ಪತ್ರದಲ್ಲಿ ಬಾಕಿ ಮೊತ್ತ ಪಾವತಿಸದಿದ್ದರೆ ಕಂಪನಿಯು ವಿದ್ಯುತ್‌ ಖರೀದಿ ಒಪ್ಪಂದದ (ಪಿಪಿಎ) ಅಡಿ ಪರಿಹಾರಾತ್ಮಕ ಕ್ರಮ ಕೈಗೊಳ್ಳಲಿದೆ. ಅದರಂತೆ ಅಕ್ಟೋಬರ್‌ 31ರಂದು ವಿದ್ಯುತ್‌ ಪೂರೈಕೆ ಸ್ಥಗಿತಗೊಳಿಸಲಿದೆ ಎಂದು ತಿಳಿಸಿದೆ.

ಬಾಂಗ್ಲಾದೇಶ ಕೃಷಿ ಬ್ಯಾಂಕ್‌ನಿಂದ 17 ಕೋಟಿ ಡಾಲರ್‌ ಮೊತ್ತಕ್ಕೆ ಪಿಡಿಬಿಯು ಸಾಲದ ಒಪ್ಪಂದ ಪತ್ರ ಒದಗಿಸಿಲ್ಲ. 84.6 ಡಾಲರ್‌ ಬಾಕಿಯನ್ನೂ ಪಾವತಿಸಿಲ್ಲ ಎಂದು ಕಂಪನಿ ತಿಳಿಸಿದೆ.

‘ಪಿಡಿಬಿ ಅಧಿಕಾರಿಗಳು ನಾವು ಹಿಂದಿನ ಒಂದು ಭಾಗದಷ್ಟು ಬಾಕಿಯನ್ನು ಪಾವತಿಸಿದ್ದೇವೆ. ಆದರೆ, ಅದಾನಿ ಕಂಪನಿ ಜುಲೈನಿಂದ ಹೆಚ್ಚು ಶುಲ್ಕ ವಿಧಿಸುತ್ತಿದೆ. ಪಿಡಿಬಿಯು ವಾರಕ್ಕೆ 1.8 ಕೋಟಿ ಡಾಲರ್‌ ಪಾವತಿಸುತ್ತಲೇ ಇದೆ. ಆದರೆ, ಶುಲ್ಕವನ್ನು 2.2 ಕೋಟಿ ಡಾಲರ್‌ ವಿಧಿಸುತ್ತಿದೆ’ ಎಂದು ಪಿಡಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ನಂತರ ಈ ಒಪ್ಪಂದದ ಅವಧಿ ಪೂರ್ಣಗೊಂಡ ನಂತರ ಹಿಂದಿನ ವಿದ್ಯುತ್‌ ಖರೀದಿ ಒಪ್ಪಂದದಂತೆಯೇ ಅದಾನಿ ಕಂಪನಿ ಶುಲ್ಕ ವಿಧಿಸುತ್ತಿದೆ ಎಂದು ವರದಿಯಾಗಿದೆ. ಹಿಂದಿನ ಪ್ರಧಾನಿ ಶೇಖ್‌ ಹಸೀನಾ ಪದತ್ಯಾಗದ ಬಳಿಕ ಬಂದ ಮಧ್ಯಂತರ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅದಾನಿ ಬಾಕಿ ಪಾವತಿಗೆ ಒತ್ತಡ ಹಾಕುತ್ತಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.