ADVERTISEMENT

‌ಅಫ್ಗಾನಿಸ್ತಾನ ಅಧ್ಯಕ್ಷರ ನಿವಾಸದ ಬಳಿ ರಾಕೆಟ್‌ ದಾಳಿ

ಕಾರು ಭಸ್ಮ, ಯಾವುದೇ ಸಾವು ನೋವುಗಳು ಸಂಭವಿಸಿದ ವರದಿಯಾಗಿಲ್ಲ

ಏಜೆನ್ಸೀಸ್
Published 20 ಜುಲೈ 2021, 8:28 IST
Last Updated 20 ಜುಲೈ 2021, 8:28 IST
ಅಫ್ಗಾನಿಸ್ಥಾನದ ಅಧ್ಯಕ್ಷ ಅಶ್ರಫ್‌ ಘನಿ ಅವರ ನಿವಾಸದ ಸಮೀಪ ಮಂಗಳವಾರ ನಡೆದ ರಾಕೆಟ್‌ಗಳ ದಾಳಿಯಲ್ಲಿ ಭಸ್ಮವಾಗಿರುವ ಕಾರನ್ನು ಭದ್ರತಾ ಪಡೆಗಳೂ ಪರಿಶೀಲನೆ ನಡೆಸಿದರು.
ಅಫ್ಗಾನಿಸ್ಥಾನದ ಅಧ್ಯಕ್ಷ ಅಶ್ರಫ್‌ ಘನಿ ಅವರ ನಿವಾಸದ ಸಮೀಪ ಮಂಗಳವಾರ ನಡೆದ ರಾಕೆಟ್‌ಗಳ ದಾಳಿಯಲ್ಲಿ ಭಸ್ಮವಾಗಿರುವ ಕಾರನ್ನು ಭದ್ರತಾ ಪಡೆಗಳೂ ಪರಿಶೀಲನೆ ನಡೆಸಿದರು.   

ಕಾಬೂಲ್‌: ‌ಅಫ್ಗಾನಿಸ್ತಾನ ಅಧ್ಯಕ್ಷ ಆಶ್ರಫ್ ಘನಿ ಅವರ ನಿವಾಸದ ಸಮೀಪದಲ್ಲಿರುವ ಮೈದಾನದಲ್ಲಿ ಮಂಗಳವಾರ ಮೂರು ರಾಕೆಟ್‌ಗಳು ದಾಳಿ ನಡೆಸಿವೆ.

ಮುಸ್ಲಿಂ ಸಮುದಾಯದ ತ್ಯಾಗ– ಬಲಿದಾನಗಳ ಹಬ್ಬ ಈದ್‌ ಅಲ್‌–ಅಧಾಕ್ಕೆ ಒಂದು ದಿನ ಬಾಕಿ ಇರುವಂತೆಯೇ ಈ ರಾಕೆಟ್‌ಗಳ ದಾಳಿ ನಡೆದಿದೆ. ಘಟನೆಯಲ್ಲಿ ಒಂದು ಕಾರು ಭಸ್ಮವಾಗಿದೆ. ಆದರೆ ಯಾವುದೇ ಸಾವು–ನೋವು ಸಂಭವಿಸಿದ ವರದಿಯಾಗಿಲ್ಲ ಎಂದು ‌ಅಫ್ಗಾನಿಸ್ತಾನ ಆಂತರಿಕ ಸಚಿವಾಲಯದ ವಕ್ತಾರ ಮಿರ್ವಾಯಿಸ್ ಸ್ಟಾನಿಕ್ಜೈ ಹೇಳಿದ್ದಾರೆ.

ಹಸಿರು ವಲಯದ ನಡುವಿರುವ ಅಧ್ಯಕ್ಷರ ನಿವಾಸದ ಸುತ್ತಾ ಭದ್ರವಾದ ಸಿಮೆಂಟ್ ಗೋಡೆಗಳಿವೆ. ರಾಷ್ಟ್ರಾಧ್ಯಕ್ಷರ ಭವನ ಸಂಪರ್ಕಿಸುವ ಸುತ್ತಮುತ್ತಲಿನ ಎಲ್ಲ ರಸ್ತೆಗಳನ್ನು ಬಹಳ ಹಿಂದೆಯೇ ಮುಚ್ಚಲಾಗಿದೆ.

ADVERTISEMENT

ಅಮೆರಿಕ ತನ್ನ ಸೇನಾಪಡೆಗಳನ್ನು ‌ಅಫ್ಗಾನಿಸ್ತಾನದಿಂದ ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆ ಆರಂಭಿಸಿದ ನಂತರ, ಅಫ್ಗನ್ ಮತ್ತು ತಾಲಿಬಾನಿಗಳ ನಡುವಿನ ಸಂಘರ್ಷ ತಾರಕಕ್ಕೇರಿದೆ. ‌ಅಫ್ಗಾನಿಸ್ತಾನ ಕೆಲವಡೆ ಯುದ್ಧದ ವಾತಾವರಣ ನಿರ್ಮಾಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.